Wednesday, August 09, 2006

ಈ ದಿನ

ರಾತ್ರಿ ..ಅರೆರೆರೆ...ಅಲ್ಲ ಬೆಳಗಿನ ಚುಮು ಚುಮು ಚಳಿಯ ೪.೦೦ ಗಂಟೆ ಈಗ, ಎನೊ ಕೆಲ್ಸ ಅಂಥ ಇವತ್ತು ಇಡೀ ರಾತ್ರಿ officeನಲ್ಲೆ ಕೂರಬೇಕಾಯ್ತು ....ಏನೊ ಒಂದು ತರಹ ಬೇಸರ, ಇಷ್ಟೆನಾ ಜೀವನ..? ಎನು ದುಡಿದು ಎನು ಪ್ರಯೋಜನ..?ನಾನು ಮಾಡೊ ಕೆಲಸ ಬೇರೆ ಯಾರಿಗೆ ಹೇಳಿಕೊಟ್ರು ಮಾಡ್ತಾರೆ ..ಇದಕ್ಕೆ ನಾನೇ ಬೇಕ ..?ನನ್ನ ಅಸ್ತಿತ್ವ ಅಂತ ಇಲ್ಲಿ ನಿರೂಪಿಸಲು ಸಾಧ್ಯನಾ..? ಬರಿ ಪ್ರಶ್ಣೆಗಳೇ ಹೊರತು ಉತ್ತರ ಇಲ್ಲ .....ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಆಮೇಲೆ ಅದೆ ಸಮಾಧಾನ ತಂದುಕೊಳ್ಳೋದು ..ಏನೊ ಸ್ವಲ್ಪ ಒಳ್ಳೆ ಸಂಬಳ ಅಂತ ಸಿಗುತ್ತೆ....
ದುಡ್ಡು,ಸಮಾಜದಲ್ಲಿ ಸ್ಥಾನ,ಮನೆ,ಕಾರು .....ಇಷ್ಟೆನಾ ಜೀವನವೀಡಿ ಒದ್ದಾಡೊಕೆ ಇರೋ ನೆಪಗಳು...?
ಈ ಪ್ರಶ್ಣೆಗಳು ಈಗ ನಿದ್ದೆ ಕೆಟ್ಟಿದಿನಿ ಅಂತಲ್ಲ ಆಗಾಗ ಕಾಡ್ತಾ ಇರುತ್ತೆ.....

1 comment:

mavinayanasa said...

ಇದು ಎಲ್ಲರ ಅನಿಸಿಕೆ. ಇದುವೇ ಜೀವ ಇದು ಜೀವನ