Thursday, August 10, 2006

ಬುನಾದಿ

ಮನಕೆ ಕದವಿಟ್ಟು,ಮಾತ ಕಟ್ಟಿಟ್ಟು,
ನಂಬಿಕೆಯ ಬದಿಗಿಟ್ಟು..,

ಇಂದೇಕೆ ನೊಂದು,ನೋಯಿಸುತಿರುವೆ..?
ಅಂಜಲು ನೀನು ..ಇನ್ನೆಲ್ಲಿಯ ನಾನು..?

ಕಂಡ ಕನಸು ಮರೀಚಿಕೆಯ ನೆರಳು,
ಇಂದು ಈಗ ಇರುವದಷ್ಟೆ ನಮ್ಮ ಪಾಲು,

ಮೂಡದೆ ಇರುವನೇ ರವಿ,
ಕಗ್ಗತ್ತಲ ಕಾಲಾಂತ್ಯದಿ..

ತಣಿಸದೆ ಇರುವುದೆ ಸುಡೊ ಧಾತ್ರಿಯ,
ವರುಣನ ಅಮೃತ ಸಿಂಚನ..

ಅಳುಕದಿರು ನಾಳೆ ನಮ್ಮದೆ...
ಭರವಸೆಯೇ ಬುನಾದಿ,ಬಾಳ ಪಯಣದಿ..

3 comments:

mavinayanasa said...

ಸುಂದರ ನಿರೂಪಣೆ

ಕಂಡ ಕನಸು ಮರೀಚಿಕೆಯ ನೆರಳು,
ಇಂದು ಈಗ ಇರುವದಷ್ಟೆ ನಮ್ಮ ಪಾಲು,

ಬಹಳ ಅರ್ಥಗರ್ಭಿತವಾಗಿದೆ.

Sunil B said...

maam...i dont understand it but i really appreciate it...

Anonymous said...

Idu tumba ista aytu.... modala nalakku line.... sikkapatte channagide.... ALL THE BEST jayantha............
-Mohana