Friday, August 11, 2006

ಜಾಗ್ರತೆ ಜಾಗ್ರತೆ

ಜಾಗ್ರತೆ ಜಾಗ್ರತೆ
ಜಗವೆಲ್ಲಾ ಮಲಗಿದೆ ಜಾಗ್ರತೆ
ಜನರೆಲ್ಲ ಮರುಳಾದರು ಜಾಗ್ರತೆ

ಹಣದ ಮೋಹದ ಮುಂದೆ
ಮನುಷ್ಯತ್ವದ ಪತನ..
ತಾನು ತನ್ನದಕ್ಕೆ
ಮಣಿದಿದೆ ಒಳ್ಳೆತನ..!

ಇದುವೇ ಕಲಿಯುಗ,
ದಿನವು ಕಲಿಯುತ್ತಿದ್ದಾರೆ
ವಂಚಿಸುವ ನವ ವಿಧಾನ..!

ಜಾಗ್ರತೆ ಜಾಗ್ರತೆ
ಜಗವೆಲ್ಲಾ ಮಲಗಿದೆ ಜಾಗ್ರತೆ

ಬಂಧು ಬಳಗವಿಲ್ಲ,
ಹೆಗಲ ಕೊಟ್ಟು ನಿಲ್ಲುವವರಿಲ್ಲ..
ಕಂಬನಿಯ ಕಾಣುವವರಿಲ್ಲ,
ಕರುಳ ಕರೆಗೆ ಮಿಡಿವವರಿಲ್ಲ

ಜಾಗ್ರತೆ ಜಾಗ್ರತೆ
ಜಗವೆಲ್ಲಾ ಮಲಗಿದೆ ಜಾಗ್ರತೆ

ದೇಶ ಭಾಷೆ ಕೇಳೋಕೆ ಚಂದ,
ನೀತಿ ನಿಜಾಯಿತಿ ಆಡೋಕೆ ಅಂದ..
ನೆರೆಮನೆ ನೆರೆ ಬಂದರೂ ಮೈಲು ದೂರ..,
ಸಮಾಜ ಸಹಕಾರ ಸಲ್ಲದ ವಿಚಾರ,

ಜಾಗ್ರತೆ ಜಾಗ್ರತೆ
ಜಗವೆಲ್ಲಾ ಮಲಗಿದೆ ಜಾಗ್ರತೆ
ಜನರೆಲ್ಲ ಮರುಳಾದರು ಜಾಗ್ರತೆ

No comments: