Monday, August 14, 2006

ಆಗಸ್ಟ್ ೧೪ ಸಂಜೆ ೭ರ ಸಮಯ

ನಾಳೆ ಸ್ವಾತಂತ್ರ್ಯ ದಿನಾಚರಣೆ....ಯಾಕೊ ಏನೊ ಮನಸೆಲ್ಲ ಕಸಿವಿಸಿ ಆಗ್ತ ಇದೆ.ಸಂಜೆ ೭.೧೦ ಈಗ ಟೈಮ್ ,ಕಿವಿಯಲ್ಲಿ ಐಪಾಡ್ ..ನೋಟಪಾಡ್ನಲ್ಲಿ ಇದನ್ನ ಟೈಪ್ ಮಾಡ್ತಿರೊ ಹಾಗೆ ತಲೆಯಲ್ಲಿ ಏನೆನೋ ಓಡ್ತಾ ಇದೆ,
"ಅಪಾರ ಕೀರ್ತಿ ಗಳಿಸಿ" ಹಾಡು ಕೇಳ್ತಾ ಇದ್ರೂ ನನ್ನ ತಲೆಯಲ್ಲಿ.."ಯಾರಿಗೆ ಬಂತು ಎಲ್ಲಿಗೆ ಬಂತು ೪೭'ರ ಸ್ವಾತಂತ್ರ್ಯ " ಬೆಳಿಗ್ಗೆ ಇಂದ ಸೀರಿಯಲ್ಗಳ ಮಧ್ಯೆ ಜಾಹೀರಾತುಗಳು ಬಂದ ಹಾಗೆ ಬಂದು ಬಂದು ಹೋಗ್ತ ಇದೆ.ಇಷ್ಟು ದೊಡ್ಡದೆಲ್ಲ ನಾವು ಯಕೆ ಯೋಚನೆ ಮಾಡ್ಬೇಕು ,ಹೇಗು ಒಂದು ದಿನ ರಜ ಸಿಗುತಲ್ಲ ಅನ್ನೊದು ಸಾಮಾನ್ಯ ಅನಿಸಿಕೆ.ಹೌದ ಅಷ್ಟೇನಾ..?
ಸಾಕಲ್ವ ಒಂದು ರಜ ಸ್ವಲ್ಪ ಟೈಮ್ ಸಿಕ್ರೆ ಬೆಳಿಗ್ಗೆ ಯಾವದಾದ್ರು ನ್ಯೂಸ್ ಚಾನ್ನೆಲ್ನಲ್ಲಿ ದೆಲ್ಹಿಯಲ್ಲಿ ಧ್ವಜ ಹಾರಿಸೊದು ನೊಡಿ,ಸಂಜೆ ಟೀವಿ ನ್ಯೂಸ್ನಲ್ಲಿ ಎಲ್ಲ ಜಿಲ್ಲ ಕೇಂದ್ರಗಳಲ್ಲಿ ಧ್ವಜಾರೋಹಣೆ ನೊಡಿ ...ಉಂಡು ಮಲಗಿದ್ರೆ ಆಗೋಯ್ತು ...ಸ್ವಾತಂತ್ರ್ಯ ದಿನಾಚರಣೆ...ನಮಸ್ಕಾರ -ಯುಗದ ಭಾರತೀಯನಿಗೆ...ನಿನಗೆ ಕೋಟಿ ನಮನ...

1 comment:

Shiv said...

ಜಯಂತ್,

ಹೌದಲ್ವಾ..ನಮ್ಮ ಯೋಚನೆ ಕೇವಲ ಒಂದು ರಜೆಗೆ,ಆವಾಗ್ ನೋಡಬಹುದಾದ ಯಾವುದೋ ಫಿಲ್ಮ್ ಬಗ್ಗೆ ಸೀಮಿತವಾಗಿದೆ.

ನಿಜವಾಗಲೂ ಕೇಳಿಕೊಳ್ಳಬೇಕಾದ ಪ್ರಶ್ನೆ..
ಅಷ್ಟೆಲ್ಲ ರಕ್ತ ಸುರಿಸಿ ಮಹಾನೀಯರು ಗಳಿಸಿಕೊಟ್ಟ ಸ್ವಾತಂತ್ರ್ಯಕ್ಕೆ ಬೆಲೆ ಇಲ್ವಾ? ಹಿಂಗಾ ಅದನ್ನ ಗೌರವಿಸೋದು??

ಸ್ವಾತಂತ್ರ್ಯೋತ್ಸವದ ಶುಭಾಶಯಗಳು!