Saturday, August 19, 2006

ಸೌಭಾಗ್ಯ

michelangelo na finger-of-god chitra..


ತಿರುಗೋ ಭೂಮಿಗೂ ಹಾಗೆಯೇ
ಒರಗಿಕೊಳ್ಳುವ ಮನಸಾಗದೆ..?

ಉರಿಯೊ ಸೂರ್ಯನಿಗು ಒಮ್ಮೆ
ತಂಪಾಗುವ ಆಸೆ ಇರದೆ..?

ಚಂಚಲ ಪವನಕು ಒಂದೆಡೆ
ನಿಲ್ಲುವ ಬಯಕೆ ಆಗದೆ..?

ನಿನಗೀ ಸೌಭಾಗ್ಯವನಿಟ್ಟವನು
ಅರೆಗಳಿಗೆ ಬಿಡದೆ ಕಾಯುತಿಹನು..

ನಿನ್ನದೆ ಕ್ಷೇಮಕೆ ನಡೆದಿರೆ ಅವಿರತ ಶ್ರಮ..
ಇನ್ನವ ಸುಖಕೆ ನಲುಗಿ ಮರೆಯುವೆ ವಿಶ್ರಾಮ..


ಬಂಗಾರದ ಹರಿಗೋಲೆ ...?
ನಾಳೆ ಮುಳುಗೊ ದೊಣಿಗೆ..

ನಾಲ್ಕು ದಿನದ ನಾಟಕದಿ
ಯಾವ ಪಾತ್ರವೋ...?

ಬದುಕು ಮಾರ್ಗವು ಸದ್ಗತಿಗೆ...
ಕೂಡಿದ್ದೆಲ್ಲ ಕಳೆವಾಗ ಲೆಕ್ಕವಿರುವುದು....
ತಿರುಗಿ ಕೊಟ್ಟದಷ್ಟೆ...!!!

1 comment:

Shiv said...

ಜಯಂತ್,

ಮುಳುಗುವ ದೋಣಿಗೆ ಬಂಗಾರದ ಹರಿಗೋಲು..
ತುಂಬಾ ಸೊಗಸಾಗಿದೆ ಈ ಸಾಲು..

ತಿರುಗೋ ಭೂಮಿ ಒರಗಿಕೊಳ್ಳೋಕೆ ಒಂದು ಹೆಗಲು ಬೇಕು ಅಲ್ವಾ..ಬಹುಷಃ ಅದಕ್ಕೆ ಆಸರೆ ಇಲ್ಲದಿರುವದರಿಂದಲೇ ಈ ರೀತಿ ತಿರುಗುತ್ತಿರಬೇಕು ಅನಿಸುತ್ತೆ..