Saturday, August 19, 2006

ಜಯಂತಣ್ಣನ ರಗಳೆ - ಭಾಗ ೧

ಸುಮಾರಾಗಿ ಒಂದು ಗಂಟೆಯಿಂದ ಆರ್ಕುಟ್,ಮೊಬೈಲ್ ನಲ್ಲಿ ಬರಿದಿರೋ ಕಂಗ್ಲಿಷ್ನಲ್ಲಿರೊ ಕವಿತೆಗಳನೆಲ್ಲಾ ಬರಹಕ್ಕೆ ಹಾಕಿ ಅಲ್ಲಿಂದ ಬ್ಲಾಗ್ ಗೆ ಪೋಸ್ಟ್ ಮಾಡ್ತ ಕೂತಿದಿನಿ..ನೀನೊಬ್ಬನೆ ಅಲ್ಲ ಏಕಾಂತದಲ್ಲಿ ಅಂತ ಹೊರಗೆ ಮಳೆ ಸದ್ದು ಮಾಡ್ತ ಇದೆ, ಕಣ್ಣು ಎಳೀತಾ ಇದೆ,ತುಂಬ ದಿನದಿಂದ ಬ್ಲಾಗ್ ಗೆ ತುಂಬಬೇಕು ಅಂದುಕೊಂಡದೆಲ್ಲ ತುಂಬೋಕೆ ಸಮಯ ಸಾಕಾಗ್ತ ಇಲ್ಲ.ಮತ್ತೆ ಬರ್ತೀನಿ ... ಇನ್ನು ಸಾಕಷ್ಟು ಇದೆ ..ಬರಿಯೋದು ಇದೆ...ಬರಿದಿರೊದನ್ನ ತುಂಬೊದು ಇದೆ..

ಅಂದ ಹಾಗೆ ಬೆಂಗಳೂರು ಮಳೆ ಏನು ವಿಚಿತ್ರ ಅಲ್ವ....? ಎಲ್ಲ ಕಡೆ ಮಳೆ ಬಂದು ,ನೆರೆ ನುಗ್ಗಿ..ನಿಲ್ಲೊ ಸಮಯದಲ್ಲಿ ಒಹೋ ಮರೆತು ಬಿಟ್ಟಿದ್ದೆ ಅಂತ ಓಡಿ ಬಂದ ಹಾಗಿದೆ..ಬೆಂಗಳೂರುನಲ್ಲಿ ಇತ್ತಿಚೀಗೆ ಎಲ್ಲಾ ಅಯೋಮಯವಾಗಿದೆ.ಛೇ ಛೇ ಅಂತಾದ್ದೆನು ಇಲ್ಲ ಸುಮ್ಮ್ ಸುಮ್ಮನೆ ಎನೆನೊ ಹೇಳ್ತಾರೆ ಅಂತ ಸಮಾಧಾನ ಮಾಡ್ಕೊಳ್ಳೊದು ಮನಸ್ಸಿಗೆ ಕಷ್ಟ ಆಗ್ತ ಇದೆ. ನಾನೇನು ಬೆಂಗಳೂರನಲ್ಲಿ ಹುಟ್ಟಿ ಬೆಳೆದವನಲ್ಲ,ಆದರೊ ಸಾಕಷ್ಟು ವರ್ಷಗಳಿಂದ ಇಲ್ಲೆ ಇದೀನಿ..ಏನು ಆಗಿದೆ ಅಂತಾದ್ದು ...?? ಬಿಡಿ ಸಾರ್ ನನಗೂ ಗೊತ್ತು ನಿಮಗೂ ಗೊತ್ತು.. ಟ್ರ್ಯಾಫ಼ಿಕ್ ನಿಂದ ಹಿಡಿದು ಗಗನಚುಂಬಿ ಕಟ್ಟಡಗಳು(ಕಟ್ಟಡ ಮೀರಿ ಬೆಳೆದಿರೊ ರ್‍ಇಯಲ್ ಎಸ್ಟೇಟ್ ರೇಟ್).......ಅಯ್ಯೊ ಬಿಡಿ ಸ್ವಾಮಿ ಪ್ರಗತಿಯ ಹಾದಿಯಲ್ಲಿರೊ ಪ್ರತಿ ನಗರದ ಲಕ್ಷಣಗಳು ಇವೇ ಅಂದ್ರಾ...ಇರಬಹುದೇನೊ ಆದರೆ ಈಗ ನಡೆಯೋಕೆ ಕಲಿತ ಮಗುನ ಕರ್ಕೊಂಡ್ ಹೋಗಿ ಮ್ಯಾರಥಾನ್ ರೇಸ್ ಬಿಟ್ಟ ಹಾಗಿದೆ ನಮ್ಮ ಬೆಂದ ಕಾಳೂರು .....ಕಾಳು ಇನ್ನು ಬೆಂದಿಲ್ಲ ಆಗಲೇ ಜನ ಊಟಕ್ಕೆ ಕೂತುಬಿಟ್ಟಿದ್ದಾರೆ..ಇರಲಿ "ಸರ್ವೆ ಜನೋ ಸುಖಿನೋ ಭವಂತು"" ಮುಂದಿನ ರಗಳೆವರೆಗು.......ನಮಸ್ಕಾರ

1 comment:

Nimma GeLeya said...

Jayanthana RagaLe chennagideri...neevu Allrounder annisthide...
RagaLe forcibly, nange nagu baruvanthe maadthu...ha ha