Tuesday, August 22, 2006

ಬೆತ್ತಲೆ ಬದುಕು


ಬದುಕು ಬೆತ್ತಲೆ,ಇನ್ನೇಕೆ ಈ ತಳುಕು

ಬಿತ್ತದೆ ಬರಿ ಉತ್ತು ಬೆಳೆಯ ಕಾಯ್ವುದು

ಬಂದದ್ದು ಬೆತ್ತಲೆ,ಹೋಗುವುದು ತೊಗಲು

ಬಗೆ ಬಗೆ ಮುಖವಾಡ ಇರುಳು ಹಗಲು

ಏನೊ ಬಿಂಕ ನನ್ನಾಳವ ಅರಿತವರಿಲ್ಲ..,

ನಾನೆ ಅರಿಯದಾಳವ ನಾಭಿಯೊಂದಿಗೆ ಇಟ್ಟವ ಎಲ್ಲ ಬಲ್ಲ..,

ಬದುಕು ಬೆತ್ತಲೆ ,

ಅರಿಯದವಗೆ ನಿತ್ಯ ನೂತನ ಜಗದ ಚೇತನ!!

ಅರಿತವಗೆ ಒಂದೆ ಸತ್ಯ,ಜಗವದೆ ಸೃಷ್ಟಿಯ ಸಾಧನ!!

ತೊಗಲು ಬೊಂಬೆಗೆ ವೇಷ ನೂರೆಂಟು..

ಶಿಶುವ ಮುದ್ದಿಸೊ ವಿಧವು ಹಲವುಂಟು..!

ಬದುಕು ಬೆತ್ತಲೆ,ಇನ್ನೇಕೆ ಈ ತಳುಕು..

ಬಿಡದೆ ನೆನೆ ಆ ಸೃಷ್ಟಿಕರ್ತನ ಅಣುಕು..

1 comment:

Anonymous said...

nimma kanada kellalu eshata hadare hodallu swalpa kashta.nimma tallegey kodbeku prashasti ,eshtella yochiso nemage sharanu