Tuesday, August 22, 2006

ಜಯಂತಣ್ಣನ ರಗಳೆ - ಭಾಗ ೨

ಹೊಸದರಲಿ ಅಗಸ ಗೋಣಿಚೀಲನ ಎತ್ತೆತ್ತಿ ಒಗೆದ ಹಾಗೆ ನನಗೂ ದಿನ ಬ್ಲಾಗ್ ದೇ ಚಿಂತೆ ದಿನವೀಡಿ ಇತ್ತೀಚೆಗೆ, ಯಾರಾದ್ರು ನೋಡಿದ್ರ ಏನಾದ್ರು ಕಮೆಂಟ್ ಹಾಕಿದ್ದಾರ ಅಂತ refresh ಮಾಡಿ ನೋಡ್ತ ಇರೋದು... ಮಾಡೋಕೆ ಏನು ಕೆಲ್ಸ ಇಲ್ವ ಅಂದ್ರ..ಅದೆಲ್ಲ ಇವಾಗ ಬೇಡ ಬಿಡಿ ಮತ್ತೆ ಆರಾಮಾಗಿ ಕೂತು ಮಾತಾಡೋಣ.ಅಂದ ಹಾಗೆ ಇವತ್ತು ಏನಾದ್ರ್ರು ಸ್ವಲ್ಪ different ಆಗಿ ಇರೋದು ಬರೆಯೋಣ ಅನಿಸ್ತ ಇದೆ ಈ ಹಾಳು ಮನಸ್ಸಿಗೆ..

ಆವತ್ತು ಹೀಗೆ ಎಂದಿನಂತೆ "ಒಲ್ಲದ ಗಂಡನಿಗೆ ಮೊಸರನಲ್ಲಿ ಕಲ್ಲು ಸಿಕ್ಕಿದ ಹಾಗೆ" ಕೆಲ್ಸ ಮಾಡೊಕೆ ಮನಸ್ಸಿಲ್ಲದೆ ಅವರ್ ಇವರನ್ನ ಬೈಕೊಳ್ತ ಕೆಳಗೆ ಬರ್ತ ಇದ್ದೆ... ನನ್ನ ಮೋಬೈಲ್ ಗೆ ಮೆಸ್ಸೇಜ್ ಬಂದ ಹಾಗಾಯ್ತು ..ಇನ್ನಾವ ಪ್ರಮೋಶನಲ್ ಮೆಸ್ಸೇಜ್ ಬಂತೋ ಅಂತ ನೋಡಿದ್ರೆ ಯಾವುದೋ ನನ್ನ ಕಾಂಟ್ಯಕ್ಟ್ಸ್ನಲ್ಲಿ ಇರದಂತ ನಂಬರ್........ನಾನು ಮೆಸ್ಸೇಜ್ ಗೆ ಏನು ಉತ್ತರ ಕೊಟ್ಟೆ...ಹೇಗೆ ನಾವು friends ಆದ್ವಿ ಅಂತ ನೀವು ಕೂಡ ಊಹಿಸಿಕೊಳ್ಳಬಹುದು...ಏನು ಹೀಗೆ ರಸಭಂಗ ಮಾಡಿದೆ ಅನಿಸ್ತ..?ಯಾಕೊ ಮುಂದಕ್ಕೆ ಹೇಳ್ಬೆಕು ಅಂತ ಅನಿಸ್ತ ಇಲ್ಲ .... ನೋಡೊಣ ಮುಂದಿನ ರಗಳೆಯಲ್ಲಿ ....

ಆಮೇಲೆ "ರತ್ನನ ಪದಗಳಿಂದ" ಮನೆ-ಮನದ ಮಾತಗಿರುವ ಜಿ.ಪಿ.ರಾಜರತ್ನಂ ಅವರ ನೆನೆಯುತ ಅವರ ಶೈಲಿ ಪ್ರಯತ್ನ....ದಯವಿಟ್ಟು ಕ್ಷಮಿಸಿ ಈ ಪ್ರಯತ್ನ ಯಾರಿಗಾದ್ರು ಸರಿ ತೋರಲಿಲ್ಲ ಅನಿಸಿದರೆ ತಿಳಿಸಿ...


ಪ್ರೀತಿ-ಬ್ಯಾನಿ


ಪ್ರೀತಿ ಗೀತಿ ಶ್ಯಾನೆ ಬ್ಯಾನಿ...
ಬುಟ್ ಬುಡಿ ತಂದಿ ನನ್ನ ಸುಮ್ನೆ...
ಮಾಡ್ಬೇಡಿ ಅನ್ನೋಕೆ ನಾ ಎನ ದೊಣ್ಣೆನಾಯಕನೇ..?
ಮಾಡೊರಿಗೆ ಒಳ್ಳೆದು ಆಗ್ಲಿ...ನಂಗದ್ರ ಸುದ್ದಿ ಬ್ಯಾಡ..
ಎಲ್ಲ ಕುಸಿಯಾಗಿದ್ರೆ ಸಾಕು,ನಂಗಿನ್ನೇನು ಹೆಚ್ಗೆ ಬ್ಯಾಡ..
ಹೇಳ್ಬೆಕು ಅನಿಸ್ದ್ನ ಹೇಳ್ದೆ ಹೋದ್ರೆ ಎದಿ ಮ್ಯಾಲ ಚಪ್ಪಡಿ ಭಾರ..
ಪ್ರೀತಿ ಬದ್ಕೊಕೆ ದಾರಿ ಸರಿ,ಕಾಲ ಕೆಟ್ಟದು ಹುಸಾರ..
ಹೈವೆನಾಗು ಆಗ್ತವೆ ಆಕ್ಸಿಡೆಂಟು..ನಮ್ಮೂರ ಸಿಂಗಲ್ ರೋಡ್ನಂಗೆ..
ಎಡವರೊನ ಎತ್ತದಂಗೆ ನಕ್ತಾವೆ ಮಂದಿ...ರಾಕ್ಸಸನಂಗೆ....!!
ಗೆದ್ರೆ ನೀ ಪ್ರೀತಿ ಗಟ್ಟಿ ಅಂತಾರ...
ಸೋತ್ರೆ "ಅಯ್ಯೋ ಮುಟ್ಠಾಳ" ..ಪಟ್ಟ ಕಟ್ತಾರ..
ಹೇಳೊ ಚಟ ನಂದು ನಾ ಹೇಳ್ಬುಟ್ಟೆ...
ನಾ ಹೇಳಿದಂಗೆ ನಡಿ ಅನ್ನೋಕೆ ನೀ ಎಡವಟ್ಟೇನು..?
ನಿಮ್ಮ ನಿಮ್ಮ ಬುದ್ದಿ ಭದ್ರ ಮಾಡ್ಕೊಂಡು,ತಣ್ಣಗೆ ಒಸಿ ನೋಡಿ..
ತೆಪ್ಪೊ ಒಪ್ಪೊ ನಿಮ್ಗು ತಿಳಿದೈತೆ..ಮನಸ್ಸಿಗೆ ಒಪ್ಪಿದು ಮಾಡಿ..

1 comment:

Shiv said...

ಪಿರಿತಿ ಬಗ್ಗೆ ಬೋ ಪಸಂದಾಗಿ ಬರದಿರ ಸಾಮಿ..
ನೀವು ಹೇಳೋದರಲ್ಲಿ ಎನೂ ತಪ್ಪಿಲ್ಲ..

>ಗೆದ್ರೆ ನೀ ಪ್ರೀತಿ ಗಟ್ಟಿ ಅಂತಾರ...
ಸೋತ್ರೆ "ಅಯ್ಯೋ ಮುಟ್ಠಾಳ" ..ಪಟ್ಟ ಕಟ್ತಾರ..

ಸೂಪರ್ ಸಾಲು!