Friday, August 25, 2006

ಬದುಕಿನ ಓಟ

ನಾ ಕೇಳಲಿಲ್ಲ ಈ ಬದುಕಿನ ಓಟ,
ಬೇಕಾಗಿರಲಿಲ್ಲ ಈ ಜೀವನ ಪಾಠ,

ಸುಖವಾಗಿತ್ತು ಹೊತ್ತೊತ್ತಿನ ಊಟ,
ದಿನವಿಡಿ ಬರಿ ಆಟ,ಹೊಸ ನೋಟ..,

ಸರಿ ತಪ್ಪುಗಳ ಇರದು ಜಂಜಾಟ,
ಇರದು ಯಾವುದೇ ಚಿಂತೆ,ಕಾಟ..,

ಹಸಿವು,ನೋವಾದರೆ ಕಿರುಚಾಟ,
ಹೊಸದ ಕಂಡರೆ ನಲಿದಾಟ..,

ಪ್ರತಿ ಕ್ಷಣವು ಏನೊ ಹುಡುಕಾಟ,
ಅಮ್ಮನ ಮಡಿಲ ನೆಮ್ಮದಿ ತೋಟ..,

ಅತ್ತರೆ ಮಿಡಿವ ನನ್ನವರ ಸಂಕಟ,
ನೆಲವ ಮುಟ್ಟದಂತೆ ಮುದ್ದಾಟ...,

ಏಕೆ ಓಡಿದೆ ಬಾಲ್ಯ ? ಬೇಕಿತ್ತೆ ಈ ಪರದಾಟ....??


ನಾ ಕೇಳಿ ಬರಲಿಲ್ಲ ಬದುಕಿನ ಓಟ..,
ಯಾರಿಗೆ ಬೇಕಿತ್ತು ಈ ಪೇಚಾಟ...?

ಅನಿವಾರ್ಯವು....ಸೃಷ್ಟಿಯ ಆಟ...!!!

No comments: