Friday, August 25, 2006

ಜಯಂತಣ್ಣನ ರಗಳೆ - ಭಾಗ ೩

"ಮತ್ತದೇ ಬೇಸರ ಅದೇ ಸಂಜೆ ...
ಅದೇ ಏಕಾಂತ...."

ಕವಿ ನಿಸ್ಸಾರ್ ಅಹ್ಮದ್ ರವರಿಗು ಈ ಬೇಸರ ಕಾಡಿತ್ತು ಅನ್ನುವದಂತು ಸತ್ಯ..ಅವರನ್ನ ಕಾಡಿದ್ದು ವಿರಹದ ಬೇಸರ..ನಮ್ಮನ್ನ ಕಾಡ್ತ ಇರೋದು .....ಹೂಂ ಹೂಂ ಇದೇ ನಿರ್ದಿಷ್ಟ ಕಾರಣ ಅಂತ ಹೇಳೊಕೆ ಬರೋಲ್ಲ...ಅದೇನೊ ದಿನವೀಡಿ ಎಲ್ಲಾ ಇದ್ದು ಏನು ಇಲ್ಲದ ಶೂನ್ಯತೆ ಕಾಡ್ತ ಇರುತ್ತೆ..

ಸಾಕಷ್ಟು ಕಡೆ ಕೇಳ್ತಿವಿ..ಆ ಪ್ರವಚನ,ಈ ಪ್ರವಚನ,ಹಿರಿಯರ ಉಕ್ತಿ,ಕತೆ ಕಾದಂಬರಿಗಳಲ್ಲಿ..ಮನಸನ್ನ ಪ್ರಶಾಂತವಾಗಿ,ಪ್ರಸನ್ನವಾಗಿ ಇಟ್ಕೊಬೇಕು ಅಂತ...ಇದು ಸಾಧ್ಯನಾ....?ಹೌದು ಅನ್ನುತ್ತೆ ನಮ್ಮ ಸಂಸ್ಕ್ರ್‍ಅತಿ,ನೀತಿ ಪಾಠ,ಯೋಗಿ ಜೀವನ ಉದಾಹರಣೆಗಳು..ಇತ್ಯಾದಿ....ಇಲ್ಲ ಅನ್ನುತ್ತಿದೆ ಈಗಿನ ಶರವೇಗದ ಇ-ಜೀವನ... E-ಜೀವನ ಸಹಜವಲ್ಲವೇ..?ನಮ್ಮ ಇಂದಿನ ದೈನಂದಿಕ ಜೀವನದಲ್ಲಿ ಯಾರು ಎಲೆಕ್ಟ್ರಾನಿಕ್ ಸಾಧನಗಳನ್ನ ಬಳಸ್ತ ಇಲ್ಲ ಹೇಳಿ..ಸದ್ಯಕ್ಕೆ ನಮ್ಮ ರೈತಾಪಿ ಜನಗಳು,ಹಳ್ಳಿಯ ನೆಮ್ಮದಿ ಜೀವನ ನಡೆಸುತ್ತಿರುವವರನ್ನ ಬಿಟ್ಟು..ಅಲ್ಲಿಯೂ ಈಗ ಟಿವಿ-ಗೀವಿಯ ಹಾವಳಿಯಂತು ಇದ್ದೇ ಇದೆ.. ದ್ರಶ್ಯ ಮಾಧ್ಯಮದ ಹೊರತಾಗಿ ಅವರು ಒಂದು ರೀತಿ ಎಷ್ಟೊ ಸುಖಿಗಳು..

ಇದಕ್ಕೆ ಹಳಿ ತಪ್ಪಿದ ರೈಲು ಅನ್ನೊದು ....ನಾನು ಒತ್ತುಕೊಡಲು ಇಚ್ಚಿಸುತ್ತಿರೋದು "E-ಜೀವನದಿಂದ ನಮ್ಮ ಬೇಸರ"....
ವಿಪರ್ಯಾಸ ಏನು ಅಂದ್ರೆ ಯಾವ ಸಾಧನಗಳು ನಮ್ಮ ಒಂಟಿತನ ದೂರಾಗಿಸೋಕೆ,ನಮ್ಮ ಜ್ಘಾನಾರ್ಜನೆಗೆ ಪೂರಕ ಅಂತ ಬಂದವೋ ಅವುಗಳೇ ಇಂದಿನ ನೆಮ್ಮದಿ ಜೀವನಕ್ಕೆ ಮಾರಕವಾಗಿವೆ..ನೀವು ನಿಮ್ಮ ತಲೆ ಬಳಿ ಮೊಬೈಲ್ ಇಲ್ಲದೇ ಮಲಗ್ತ ಇದ್ದೀರ ಅಂದ್ರೆ ಈ ರಗಳೆ ನಿಮಗೆ ಬರೆದಿರುವದಲ್ಲ...

ಯಾಕೆ ಹೀಗೆ ....ನಮಗೆ ಏನು ಕೆರೆದು ಹುಣ್ಣು ಮಾಡಿಕೊಳ್ಳುವುದು ಅಷ್ಟು ಖುಷಿನಾ...? ಎಲ್ಲ ಚೆನ್ನಾಗೆ ಇತ್ತಲ್ವ ಮುಂಚೆ..?ಬದಲಾವಣೆ ಜಗದ ನಿಯಮ ಆದ್ರೆ ಅತಿಯಾದ್ರೆ ಅಮ್ರತಾನು ವಿಷವಾಗುತ್ತೆ ಅನ್ನೋದು ಮನಸ್ಸಿನಲ್ಲಿ ಇಟ್ಕೊಬೇಕು..

ಈ E-ಜೀವನದಿಂದ ಪ್ರ್‍ಏರಿತನಾಗೆ ನನ್ನ ಬ್ಲಾಗ್ ಗೆ Eಯುಗದ ಪರಿಚಯ ಅಂತ ಹೆಸರಿಟ್ಟದ್ದು ಕೂಡ..

4 comments:

kaaloo said...

ಜಯಂತಣ್ಣ,

ಈ ಸಲಕರಣೇ ಎಲ್ಲಾ ಇರೋದ್ ನಮ್ ಒಳ್ಳೇದಕ್ಕೇ ಅಲ್ವಾ, ಅದನ್ನ ಬರೀ ಸಲಕರಣೇ ಅನ್ನೋ ತರ ತಿಳಕಂಡ್ ಉಪಯೋಗ್ಸಿದ್ರೆ, ಅದರ ಇತಿ-ಮಿತಿಯಲ್ಲಿ ಅದನ್ನ ಇಟ್ರೆ ಬದುಕು ಹಸನಾದೀತು ನೋಡ್ರಿ. ನಮಿಗೆ ನಿಮ್ಮಷ್ಟು ಅನುಭವಾ ಇಲ್ಲ, ಆದ್ರೂ ನೀವು ತಲೀ ಪಕ್ಕಕ್ಕ ಸೆಲ್ ಫೋನ್ ಇಟಗಂಡು ಅದ್ ಹೆಂಗ ನಿದ್ದೀ ಮಾಡ್‌‍ತೀರೋ? ಒಂದಿಷ್ಟು ದಿನಾ ರಾತ್ರಿ ಹೊತ್ತ್ ಅದನ್ನ್ ಬಿಟ್ಟು ಇರ್ರಿ, ಏನಾಕತಿ ನೋಡೋಣಂತs!

Soni said...

Namaskara Jayanth avrige :-)

Howdalwa Badalavane ildhe idre life chenda iruttha?

Iro salakaranegaLanna "Misuse" madkondre heege besara barutthe :-)

Aadre nimge yenu besara??? gotthaglilwalla!!!!!

jayant said...

kaalo anna..,
neevy hELodu sari ..praytna maadtini..aadare ee anubhavada maatu maatra nanu oppolla adenge saar andri nimangintha anubhava jaasti ide anta..

Soni avare..
nanna besara kELoke yaaru illa annode dodda besara..!!

Shiv said...

ಅದು ಹಂಗೆ ಅಲ್ವಾ..
ಇರುವುದೆಲ್ಲ ಬಿಟ್ಟು ಇರದೆಡೆಗೆ ತುಡಿವುದೇ ಜೀವನ ಅಲ್ವಾ..