Thursday, August 31, 2006

ಮೊಬೈಲ್ ಮೆಲುಕು

ನೀ ಪಟ ಪಟನೆ ನುಡಿಯಲು,
ಮನವೆಲ್ಲ ನೀಲಿ ಮುಗಿಲು..

ನುಡಿಯ ನಡುವೆ ನಗು ಕಿಲ ಕಿಲ,
ಕಾಣದೆ ಅಡಗಿದೆ ಎಲ್ಲೊ ದಿಗಿಲು..,

ಮತ್ತೆ ಏನು..?ಮತ್ತೆ ಏನು..?
ಮತ್ತೆ ಮತ್ತೆ ನೀ ಕೇಳುತಿರೆ,

ಏನಿಲ್ಲ ನೀನೆ ಹೇಳು
ನಾ ನುಡಿದಿರೆ..,

ಅಂತರಂಗದ ಅಹವಾಲು ಆಲಿಸದಾದೆಯ..?
ದೂರ..ವಾಣಿ ಹ್ರದಯವಾಣಿ ದೂರಾಗಿಸಿದೆಯ..!!

ನಗುತಿರು ಹೀಗೆ ಸದಾ,
ನನ್ನವಳಾಗಿ ಬಾ ನೀಡು ಮುದ..

ಪ್ರತಿ ಬಾರಿ ನಿನ್ನೊಡನೆ ಸಂವಾದದ ರಸ,
ನವೋಲ್ಲಾಸ..,ಹರಿದ ಹಾಗೆ ಜೋರು ಮಳೆಗೆ ಕಸ..!!

ಓಮ್ಮೊಮ್ಮೆ ನಿನ್ನ ಅ ತುಂಟ ಸವಾಲುಗಳು..,
ನಾ ಮೆಲುಕು ಹಾಕಿ ನಗುವ ಗಳಿಗೆಗಳು...

ಕರೆ ಮಾಡದೆ ಕರಿ ಮೋಡವ ದಿಟ್ಟಿಸುವೆ..!!
ನಿನ್ನೊಡನೆ ನುಡಿವುದ ಚುಕ್ಕಿಗಳಿಗೆ ಒಪ್ಪಿಸುವೆ..

ನಗುವನೋ ಆ ಚಂದ್ರನು ಮುಸಿ ಮುಸಿ..,
ನಮ್ಮಿಬ್ಬರ ಪಾಡು ಲಕ್ಷಿಸಿ..,


ನಿನ್ನ ಪರಿಚಯ ಆ ಕರಗಿಸೊ ಕೊರಳ ದನಿ..,
ನಿನಗಾದದ್ದೊ ಕರ ಕರ.. ಕೊರಳ ದನಿ

ಅಂದೊಮ್ಮೆ ಬಣ್ಣಿಸಿದೆ ನಿನ್ನ ರೂಪ..,
ನಾ ಕಲ್ಪಿಸಿಕೊಂಡದ್ದು.. ಅಪರೂಪ!!

ಮತ್ತೆ ಒಮ್ಮೆ ನಿನ್ನ ಕೋಪದ ಬಿಸಿ ತಟ್ಟಿ,
ಕೋಪದಲು ಊಹಿಸಿದ ನಿನ್ನಂದ ಮನ ಮುಟ್ಟಿ..,

ನಾ ನಿನ್ನ ನೋಡಿ,ನೀ ನನ್ನ ನೋಡಿ,
ಭ್ರಮ ನಿರಸನವಾಗುವುದೊ ಭಯ..,

ನೋಡದೆ ಹೀಗೆ ಮಾತನಾಡುತ ದಿನವಿಡೀ,
ಮರುಳನಾಗುವೆನೊ ...ಸಂಶಯ...!!!

No comments: