Thursday, August 31, 2006

ಸ್ವಲ್ಪ ತಮಾಷೆ

ಇಷ್ಟು ದಿನ ಸ್ವಲ್ಪ ಜಾಸ್ತಿನೇ ಅನ್ನೊ ಅಷ್ಟು ತತ್ವ ಆಯ್ತಲ್ಲ...ಸ್ವಲ್ಪ ತಮಾಷೆ ಮಾಡೋಣ ಅನಿಸ್ತ ಇದೆ ..

ಹೀಗೆ ಸುಮ್ಮನೆ ಕುಶಲೋಪರಿ ಪ್ರಶ್ನೆಗಳನ್ನು ನಾವು ದಿನ ನಿತ್ಯ ಕೇಳ್ತ ಇರ್ತಿವಿ..ಅದಕ್ಕೆ ನೀವು ನಿಜವಾಗಲು ಮನಸ್ಸಿನಲ್ಲಿರೊ ಉತ್ತರ ಕೂಟ್ಟರೆ ಹೇಗಿರುತ್ತೆ ..ಒಂದಷ್ಟು ತುಣುಕುಗಳು ಇಲ್ಲಿವೆ..

ಎದುರಿಗೆ ಸಿಕ್ಕೊರು ಕೇಳ್ತಾರೆ..."ಊಟ ಆಯ್ತ...?" ಸಾಮನ್ಯವಾಗಿ ಉತ್ತರ "ಆಯ್ತು ನಿಮ್ದು..?" ಅದೆ ಹೀಗೆ ಕೇಳಿದರೆ ಹೇಗಿರುತ್ತೆ.."ಆಗಿಲ್ಲ ಹಾಕಿಸ್ತೀರ....???"

ಮತ್ತೆ ದಿನಕ್ಕೆ ನೂರು ಸಲ ಕೇಳೊದು .."ಏನು ಸಾರ್ ಆರಾಮ..?" ಇದಕ್ಕೆ ಯಾವಾಗಲು ಒಂದು ಕಿರುನಗೆಯೊಂದಿಗೆ ಉತ್ತರ "ಒಹೊ..ಫ಼ುಲ್ಲು ಆರಾಮು ..ನೀವು ಹೆಂಗಿದಿರ.ಅಂತನೊ ಅಥವ ನಿಮ್ಮ ಮೂಡ್ ಸರಿ ಇಲ್ಲಂದರೆ "ಏನೊ ಹೀಗೆ ಇದಿವಿ ಅಂತನೊ"..ಯಾವತ್ತದರು ಮನಸ್ಸಿನಲ್ಲಿರೊದು ಹೇಳಿದರೆ ಇನ್ನೊಂದು ಸಲ ನಿಮ್ಮನ್ನ ಆ ಪ್ರಶ್ನೆ ಕೇಳ್ತಾರ ಯೋಚಿಸಿ ನೋಡಿ...

"ಅಯ್ಯೊ ಏನು ಆರಾಮು ಸರ್.. ರಾತ್ರಿ ಹೊತ್ತು ನಿದ್ದೆ ಬರೊಲ್ಲ ಆಕಸ್ಮತ್ ಬಂದ್ರು ಮಧ್ಯದಲ್ಲೇ ಎಚ್ಚರ ಆಗುತ್ತೆ, ಬೆಳಿಗ್ಗೆ ಏಳೊಕೆ ಮನಸ್ಸು ಬರೊಲ್ಲ ಬಂದ್ರು ...ಆಫ಼ೀಸ್ ಗೆ ಹೋಗ್ ಬೇಕು ಅನಿಸಲ್ಲ..ಹಾಗು ಮನಸ್ಸು ಮಾಡ್ಕೊಂಡು ಹೋಗೊಣ ಅಂದರೆ ..ಮೋಶನ್ ಸರಿ ಆಗಲ್ಲ ಎಷ್ಟು ಬೇಗ ಹೊರಟರು ಲೇಟ್ ಆಗುತ್ತೆ..ಆಫ಼ೀಸ್ ನಲ್ಲೊ ಆ ಕಲಗಚ್ಚು ಕಾಪಿ ಟೀ ಕುಡಿಯೊಕೆ ಆಗೊಲ್ಲ""...ಹೀಗೆ ಇನ್ನಷ್ಟು....

ಆರಾಮ...? ಅಂತ ಕೇಳ್ದೊರ್ ಕತೆ ಇಷ್ಟು ಹೊತ್ತಿಗೆ .....ಅಷ್ಟೆ..

ಆಮೇಲೆ ನಿಮಗಷ್ಟು ಇಷ್ಟವಿಲ್ಲದೊರ ಜೊತೆ ಫೋನ್ ನಲ್ಲಿ ಮಾತಡ್ತ ಇದಿರ ಅಂದುಕೊಳ್ಳಿ ..ಎಷ್ಟು ಬೇಡ ಅಂದರು ಹತ್ತು ಇಪ್ಪತ್ತು ನಿಮಿಷ ಮಾತಾಗುತ್ತೆ ...ಅವನು ನಿಲ್ಲಿಸೊ ಹಾಗಿಲ್ಲ ..ನೀವು ಹೇಳೊ ಹಾಗಿಲ್ಲ....ಅಂತು ಕೊನೆಗೆ ಪಾರ್ಟಿ "ಎ ತುಂಬ ಹೊತ್ತಾಯ್ತು ,ಮಾತಡ್ತ ಗೊತ್ತೆ ಆಗ್ಲಿಲ್ಲ (ನಿಮಗೆ ಗೊತ್ತಾಯ್ತಲ್ವ) ಇಡಲ ಅಂತಾನೆ "

ನಿಮ್ಮ ನಾಲಿಗೆ ತುದಿಯಲ್ಲಿ ಕುಣಿಯೊದು ಆಗ....."ಅಷ್ಟು ಮಾಡಿ ಪುಣ್ಯ ಕಟ್ಕೊಳಪ್ಪ...." ಎಷ್ಟು ಚೆನ್ನಾಗಿ ಇರ್ತಿತಲ್ವ ಹೀಗೆಲ್ಲ ಮಾತಡೊ ಆಗಿದ್ರೆ.....ಮನಸ್ಸು ಗಾಳಿಯಷ್ಟು ಹಗುರ....

ಆಮೇಲೆ ಕರೆಯದ ಬಂದ ಮಹಾರತಿಗಳು ....ಗಂಟೆಗಟ್ಟಲೆ ಕೊರೆದು ಬರಲ ಅಂದಾಗ ಅಂತು ......"ಇನ್ನು ಹೋಗಿಲ್ವ ....." ಅಂತ ಕೇಳ್ಬೇಕು ಅನಿಸಲ್ವ...???

ಪಟ್ಟಿ ಹೀಗೆ ಬೆಳೀತ ಹೋಗುತ್ತೆ ... ನಿಮಗೆ ಇದೇ ರೀತಿ ತೋಚಿದನ್ನ ಪಕ್ಕದಲ್ಲಿ ಟ್ಯಾಗ್ ಬೋರ್ಡ್ ಇದೆಯಲ್ಲ ಅಲ್ಲಿ ಬರಿರಿ ಅಥವ ಕಮೆಂಟ್ ಮಾಡಿ ......ಅದೆನೊ ಮಾಡ್ಲಿಲ್ಲ ಅಂದ್ರೆ ನನಗೆ ಗೊತ್ತು ನಿಮಗೆ ಏನು ಅನಿಸ್ತ ಇದೆ ಅಂತ.... "ಏನೊ ಬರೆದಿದ್ದಿನಲ್ಲ ಅಂತ ಕಷ್ಟ ಪಟ್ಟು ಓದ್ತ ಇದ್ರೆ ಇದು ಬೇರೆ ತಲೆನೋವು..........."


ನಗ್ತ ಇರಿ.....ನಗಿಸ್ತ ಇರಿ.......

No comments: