Thursday, August 31, 2006

ಸರಿ ಯಾವುದು???

ಮರುಳರಾರು..ದುರುಳರಾರು .ಈ ಜಾತ್ರೆಯಲಿ...?
ಅರಿವುದು ಹೇಗೆ ನಡೆಯಲೊಂದು,ನುಡಿಯಲೊಂದು..!!

ನಕ್ಕಾಗ ಕಂಡದ್ದು ನಗುವೊ..?ಬಿಳಿ ದಂತವೊ..?
ಅತ್ತದ್ದು ಮನವೊ..? ಒದ್ದೆಯಾದ ಅಕ್ಷಿಯೊ..?

ಎಲ್ಲ ಭಾವಕೊಂದು ಪರದೆ..!!
ಅರಿತವರಾರು ಅದರ ಹಿಂದೆ..?

ತಪ್ಪ ತಿದ್ದುವರ ತಪ್ಪು ಕಾಣದು..
ಮನಕ್ಕೊಪ್ಪಿದ್ದು ಮಾತ್ರ ಜಗಕೆ ಸರಿ ಬಾರದು..!!

ತೆರೆ ಸರಿವುದನ ಕಾಣರಾರು...
ಪರರಂತೆ ಅಂಕವನೇರುವರು...!!

ಜನ,ಜಗವೇ ಹೀಗೋ...
ಮನಕ್ಕೆ ತೋಚುವುದು ಹಾಗೊ...??

No comments: