Friday, August 11, 2006

"ಬದುಕಿನ ಗುಟ್ಟು"


ಬರೀ ಸುಖವನುಂಡು ಅರಗಿಸಿಕೊಂಡವರಿಲ್ಲ,
ಮಳೆಯ ನಂತರ ಚಳಿಯು,ಚಳಿಯ ನಂತರ ಬಿಸಿಲು,
ಸ್ರ್‍ಇಷ್ಟಿಯ ನಿಯಮ..

ನಾಲ್ಕು ದಿನ ನಲಿದರೆ ಅದುವೆ ಸೌಭಾಗ್ಯ,
ನಾಳೆಗಳು ಏನ ತರುವವೋ..ನಾಳೆಗಳೇ ಅರಿಯವು..,
ಇದ್ದಷ್ಟರಲ್ಲಿ ನಗುವು.. ವಿಧಿಗೆ ಸವಾಲು..,

ಪಡೆದ್ದೆದ್ದೆಲ್ಲ ಕೇವಲವಾಗಿ,ಬೇಡುವದೆಲ್ಲಾ ದೂರವಾಗಿ
ಬಾಳು ನಿಂತ ನೀರಾಗುವ ಮುನ್ನ...,

ಇರುವುದೆಲ್ಲವ ಅಂಗೀಕರಿಸಿ,ಕೈ ಹಿಡಿದು ನಾಲ್ಕು ಅಡಿಯ ಜೊತೆಗೂಡಿ
ಇಟ್ಟ ಹೆಜ್ಜೆ ಗುರುತ ಬಿಟ್ಟು,ತಿರುಗಿ ನೋಡೆ ತುಂಬಿ ಬರುವುದು....
"ಬದುಕಿನ ಗುಟ್ಟು".....!!

- ಜಯಂತ-

No comments: