Monday, August 14, 2006

ನಾಳೆ ಸ್ವಾತಂತ್ರ್ಯ ದಿನಾಚರಣೆ..?

ಸ್ವಾತಂತ್ರ್ಯ ಯಾರಿಗೆ ಬಂದದ್ದು...?

ತಾಯೇ ನಿನ್ನ ನೋವ ನಾ ನೋಡಲಾರೆ...,
ಹೇಗೆ ಸಹಿಸಿರುವೆ ಈ ಅನೀತಿ,ಅನ್ಯಾಯವ..

ತಮ್ಮವರನೇ ನುಂಗಿ ಬೀಗುತಿರುವ ಮಂದಿ
ಸರಿ ತಪ್ಪುಗಳ ಅಂತರವರಿಯದ ಮಂದಿ

ಏಕೆ ತಾಳುತಿರುವೆ,ಏಕೆ ಸುಮ್ಮನಿರುವೆ
ಒಮ್ಮೆ ತೋರಬಾರದೆ ನಿನ್ನ ಆಕ್ರೋಶ..

ಒಮ್ಮಲೆ ನುಂಗಬಾರದೆ ಈ ನೀತಿಗೆಟ್ಟವರನ..!!
ನಾಳೆ ನಿನ್ನ ಬಿಡುಗಡೆಯ ಸಂಭ್ರಮ....?

ನೀ ನೊಂದಿರುವೆ, ಬೆಂದಿರುವೆ ,
ನಿನ್ನೊಡಲು ಉರಿದು ಸುಡುತಿರೆ ..
ಇನ್ನಾವ ಸಂಭ್ರಮ,ಇನ್ನೇಕೆ ನಲಿವು..

ಇನ್ನೊಮ್ಮೆ ಬೇಕು ನಿನಗೆ ಬಿಡುಗಡೆ...
ಈ ದುಷ್ಟ,ಭ್ರಷ್ಟ,ಹೆತ್ತೊಡಲ ಉರಿಸುವವರಿಂದ...


ನಿಜವಾಗ್ಲೂ ಹೇಳಿ ದಿನ ನಿತ್ಯದ ಸುದ್ದಿ ಕೇಳಿ , ನೋಡಿ ..ನಮಗೆ ಸ್ವಾತಂತ್ರ್ಯ ಸಂತಸದ ಕ್ಷಣಗಳು ಅಂತ ಅನಿಸುತ್ತ..??

1 comment:

Anonymous said...

samayochita