Saturday, August 19, 2006

ತನ್ನತನ


ಕಾನನವೊ,ನಿಬಿಡ ಜನಸಗರವೋ
ತನ್ನದೆ ಕಂಪ ಸೂಸುವ ಹೂವು..,

ಅದೆಷ್ಟು ಸವೆದರು ತನ್ನತನವನೇ..
ಬೀರುವ ಸಿರಿಗಂಧ..

ಊರು ಕೇರಿ ಅಲೆದು ಬಿಡದೆ.. ಒಡೆಯನ
ಮನೆ ಕಾಯ್ವ..ಶ್ವಾನ..

ಎಲ್ಲೆಲ್ಲಿ ಮೇದರೂ ತನ್ನ ತಾಣದೇ
ಹಾಲೂಡುವ ಗೋವು

ನೂರು ಹೂವ ಸಿಹಿ ಉಂಡರು,ತನ್ನ
ಗೂದಿನಲ್ಲೆ ಕೂಡಿಡುವ ಜೇನು..

ಆಗಸದೇ ವಿಹರಿಸಿ,ಸೂರ್ಯನಂತೆ
ಗೂಡ ಸೇರುವ ಹಕ್ಕಿ..,

ಎಲ್ಲ ಕೂಡಿ ಏನೊ ಹೇಳ ಹೊರಟಂತೆ ಭಾಸ..

ಮರೆಯಲುಂಟೆ ನಿನ್ನ ನೆಲ,ಭಾಷೆ..??
ಅಲ್ಲಗಳೆವೆಯ ನಿನ್ನತನ..?
ಮೊರೆ ಹೊಗುವೆಯ ಪರಕೀಯನ..?

No comments: