Saturday, August 19, 2006

ಮೊರೆಯ ಕೇಳು


ಭವಕೆ ನನ್ನಟ್ಟಿ,ನಿನ್ನಿರುವ ಬಚ್ಚಿಡುತ,
"ಭವತಿ ಭಿಕ್ಷಾಂ ದೇಹಿ"ಎನೆ ನಾ ಅಲೆದಾಡುತ,

ನಿನಗೆನು ಸಂತಸವೊ ನೀನೆ ಪೊರೆಯುವರ ಕಾಡುವುದು..?
ಅರಿಯದಾದೆ ನಿನ್ನೀ ಕಣ್ಣ ಮುಚ್ಚಾಲೆಯಾಟವು..

ನೊಂದಾಗ ನೀನಿರುವೆ ಎಂದು ಬಂದೆ..
ನಲಿವಾಗ ನಿನ್ನದೆ ಕೃಪೆ ಎಂದು ಮುಗಿದೆ..

ಅಶಕ್ತ,ದುರ್ಬಲ ಬಿರುದಾವಳಿಗಳು..
ನೀನೆ ಸಕಲವೆಂದವರಿಗೆ...

ಇನ್ನೆಲ್ಲಿ ನೆನೆವರೋ ನೀನಿಟ್ಟ ಭಿಕ್ಷೆ
ಈ ಜೀವ...ಇರುವವರೆಗು..

ಕೊಟ್ಟವನ ಮರೆತ ನೀತಿಗೆಟ್ಟವರು
ತನ್ನದಲ್ಲದ ಸ್ವತ್ತಿಗೆ ಬೀಗುವರು..

ಇನ್ನಾರ ಮೊರೆ ಹೋಗುವೆ..,ನಾ ಹಸಿದು ನಿಂದೆ..
ಬೇಡ ತಂದೆ ಇನ್ನೆಷ್ಟು ದಿನವೀ ಪರಿತಾಪ..

ನಿನ್ನಲ್ಲೊ.....ಇಲ್ಲ ನಾನೆಲ್ಲೋ

No comments: