Monday, August 21, 2006

ಕನ್ನಡದ ಕರೆ


ನೋಡಲು ದೇಶ ಹಲವು,
ತಿನ್ನಲು ಖಾದ್ಯ ನೂರು,
ಆಚಾರ ಹಲವಾರು..,
ಆಡಲು ಭಾಷೆ ಒಂದೇ ....ಕನ್ನಡ.

ಕೇಳಲು ಸಂಗೀತ ಹಲವು,
ಕಲಿಯಲು ವಿದ್ಯೆ ನೂರು,
ಅರಿಯಲು ವಿಷಯ ಸಾವಿರಾರು,
ಮನಕೆ ಮುದ ನೀಡುವುದೊಂದೆ...ಕನ್ನಡ.

ಒಂದೇ ಒಂದೇ ಒಂದೇ,
ಎಂದೆಂದು ಕನ್ನಡವೆ ಮುಂದೇ..,
ತಟ್ಟಿ ಹೇಳುವ ಎದೆ,
ನಾ ಕನ್ನಡಿಗ,ಜೊತೆಗೂಡಿ ನಡೆ...

ನಡೆ ಕನ್ನಡ, ನುಡಿ ಕನ್ನಡ..,
ಜೀವನಾಡಿ ಕನ್ನಡ..,
ಕನ್ನಡಿಗರೆಲ್ಲ ನಡೆಯೊಣ ಸಂಗಡ,
ಹಸಿರಾಗಿಸುವ ..ಕನ್ನಡ..

ಕುಲವ ಮರೆತು,ಎಲ್ಲ ಕಲೆತು,
ಕೂಗಿ ಕೂಗಿ ಸಾರುವ....,
"ಕನ್ನಡವೆ ಸತ್ಯ,ಕನ್ನಡವೆ ನಿತ್ಯ"....
ಮುಗಿಲ ಮುಟ್ಟಲಿ ಕರೆ,
ಕನ್ನಡಿಗರ ಬಡಿದೆಬ್ಬಿಸಲಿ ಕೂಗು ....

3 comments:

mavinayanasa said...

ಬ್ಲಾಗು ಬಹಳ ಚೆನ್ನಾಗಿದೆ. ಜಾಸ್ತಿಯಾದ ಆಡಂಬರವಿಲ್ಲದೇ ಬಿಚ್ಚೋಲೆ ಗೌರಮ್ಮನ ಹಾಗೆ ನೈಜತೆ ತೋರಿಸುತ್ತಿದೆ. ಇನ್ನು ಇದಕ್ಕೆ ಬೇಕಿರೋ ಆಭರಣವೆಂದರೆ, ಕವನಗಳ ಸರಮಾಲೆ.

ಮುನ್ನಡೆಯಿರಿ. ಎಲ್ಲ ಒಳ್ಳೆಯದಾಗುವುದು.

Avi said...

ಓಹ್, ಸೊಗಸಾಗಿದೆ ಕವನಗಳ ಮಾಲೆ
ಮುಂದುವರಿಯಲಿ ನಿಮ್ಮ ನೆಟ್ ಓಟ.

Anonymous said...

super jayanth tumba chennagi bardidira...

hige continue maadi ....