Tuesday, August 22, 2006

ಮುಗಿಲ ಮಲ್ಲಿಗೆ


ಮುಗಿಲ ಮಲ್ಲಿಗೆ ನೀನಾಗೆ..,
ನಿನ್ನ ಬಯಸಿ ನಾ ಬರಿದಾಗೆ..

ನೀನಿರದೆ ನಡೆದೆ ಅನುದಿನ..,
ಭಾರವಾದ ಹೆಜ್ಜೆ, ನಿಟ್ಟುಸಿರ ಸಮಕ್ಷಮ ..

ನನ್ನೊಲವ ಬಳ್ಳಿಗೆ ಇನ್ನೆಲ್ಲಿಯ ವಸಂತ..,
ಇಹುದು ನನ್ನೊಡನೆ ಬರಿ ಏಕಾಂತ..

ಅಯ್ಯೋ ನಗುತಿರೆ ವಿಧಿ ಅಣಕಿಸಿ..,
ಅಳುವು ಬಾರದು ಬಿಕ್ಕಳಿಸಿ..

ಮನ ಕೇಳದು ನೀ ದೂರಾದ ಸಂಗತಿ..,
ಅರಿಯದ ಮೂಢ..,ನೀನಿನ್ನು ಸಂಗಾತಿ..

ಸಾವಿರ ಹೂವ ತೋಟದಿ,ಮುಡಿಯೇರುವುದೊಂದೆ..,
ನನ್ನ ಬಾಳ ಬೆಳಗೊ ದೀವಿಗೆಯು ಒಂದೇ..

ನೋವು ಮನಕಷ್ಟೆ..,ಬದುಕೇಕೆ ಭಾರ..?
ಕೀಲಿರಿದ ಬಂಡಿ ನಿರಾಧಾರ..

ಮಾಗಿಸುವನೊ ಗಾಯಗಳ..ಕಾಲ..!!!
ಶೇಷವಿರುವುದೆ ಕಲೆ....ಸದಾಕಾಲ....?

No comments: