Tuesday, August 22, 2006

ನಾ ಪಡೆದು ಬಂದದ್ದು

ಇದು ನಾ ಪಡೆದು ಬಂದದ್ದು,
ಶ್ರಮ ಪಡುವದಕ್ಕೆ ಅರ್ಥವಿಲ್ಲ,
ಬರಿ "ಅರ್ಥ"ಕ್ಕಾಗಿ ದುಡಿದು ಸಾರ್ಥಕವಿಲ್ಲ..

ಮರೀಚಿಕೆಯ ಬೆನ್ನತ್ತಿ ಬದುಕಿಡೀ ಬಸವಳಿದು,
ದಣಿದ ಮನಕ್ಕೆ ಉಲ್ಲಾಸವಿಲ್ಲ,
ಉಲ್ಲಾಸವಿರುವೆಡೆ ತರ್ಕ ಒಪ್ಪದಲ್ಲ...


ಮುಂದೆ ಯಾವುದೊ ದಾರಿ ಕಾಣದು,
ದೂರದ ತೀರ ಕಾಣಲಿಲ್ಲ,
ಕಂಡ ಕಂಡ ನಾವೆಯ ಪಯಣವು ಒಗ್ಗಲಿಲ್ಲ...

ಭದುಕಲಿ ದ್ವಂದ್ವ ಎಂದು ಕೈ ಬಿಡದು,
ಮನಕ್ಕೆ ತರ್ಕ ರುಚಿಸಲಿಲ್ಲ,
ಬದುಕು ಭಾವನೆಗೆ ಬಗ್ಗಲಿಲ್ಲ...

ಇದು ನಾ ಪಡೆದು ಬಂದದ್ದು...,
ಅವರವರ ಪಾಲಿನ "ಆ ದೇವನಿಟ್ಟ ಬಿಕ್ಷೆಯಂತೆ",
ಇದು ನಾ ಪಡೆದು ಬಂದದ್ದು .......!!!!!!!!!

2 comments:

Shiv said...

ಇದು ನಾ ಪಡೆದು ಬಂದದ್ದು..ಒಂದು ತರ submissive ಸೋತಾ ಮನೋಭಾವ ಅನಿಸೊಲ್ವ??

ಅದರ ಬದಲು ನಾ ಎನೋ ಪಡೆಯಲು ಪ್ರಯತ್ನಿಸಿದೆ..ಅದು ಸಿಗಲಿಲ್ಲ..ಆದರೆ ಹೀಗೆ ಪ್ರಯತ್ನ ಮಾಡೋದಾ ಬಿಡೋಲ್ಲ ಅಂದರೆ ಹೆಂಗಿರುತ್ತೆ?

jayant said...

Eno saar ..nanantu aa vidhaatana munde submissive...