Friday, August 25, 2006

"ಅವಕಾಶ ವಂಚಿತರು"

ಬರೀ ಕವನ/ಕವಿತೆ ಬೇಜಾರಾಯ್ತ..?ಇದು ಒಂದು ಹೊಸ ಪ್ರಯತ್ನ...

"ಅವಕಾಶ ವಂಚಿತರು"

ಇದು ನನ್ನ ತಲೆಗೆ ಹೊಳೆದದ್ದು ಇವತ್ತು ನನ್ನ ಸಹೊದ್ಯೊಗಿಗಳ ಬಿಸಿ ಬಿಸಿ ಚರ್ಚೆ ಇಂದ. ಊಟ ಮಾದ್ತ ಅದು ಇದು ಮಾತಾಡೋದು ರೂಢಿ ತಾನೆ ..ಎರಡು ಮೂರು ದಿನದಿಂದ ಇವರಿಬ್ಬರ ಮಧ್ಯೆ ಇದೆ ಚರ್ಚೆ ..ಒಬ್ಬ "ನಿನಗೆ ಹುಟ್ಟಿನಿಂದಲೆ ಅವಕಶ ಇತ್ತು ಅದಕ್ಕೆ ನೀನಿಷ್ಟದಾರು ಮೇಲೆ ಬಂದಿದಿಯ ಅಂತ ..." ಮತ್ತೊಬ್ಬ " ಅವಕಾಶ ಎಲ್ಲರಿಗು ಇರುತ್ತೆ ,ಅದನ್ನ ಹೇಗೆ ಉಪಯೋಗಿಸಿಕೊಳ್ತಾರೆ ಅನ್ನೊದು ಮುಖ್ಯ ಅಂತ"..ಇದಕ್ಕೆ ಪ್ರತ್ಯುತ್ತರವಗಿ ಮೊದಲೆನಯವನ ಉತ್ತರ.."ಯಾವ ಅವಕಾಶ...? ನೀನು ಯಾವುದೊ ಗುಡ್ಡ ಗಾಡಿನಲ್ಲೊ,ಕುಗ್ರಾಮದಲ್ಲೊ ಹುಟ್ಟಿದ್ದರೆ ಇನ್ನಾವ ಅವಕಾಶವಿರುತಿತ್ತು ....?"

ಆಯ್ತು ಒಪ್ಪೋಣ ಏನು ಇರದ ಕಡೆ ಇಂದ ಬಂದ ಎಷ್ಟೋ ಮಂದಿ ತುಂಬ ಎತ್ತರಕ್ಕೆ ಬೆಳೆದಿದ್ದಾರೆ ಅಂತ..ಆದರೆ ಆ ಸಂಖ್ಯೆ ಬೆರೆಳೆಣೆಕೆಷ್ಟಲ್ಲ್ವೆ..?


ಸ್ವಲ್ಪ ಯೊಚನೆ ಮಾಡಿ ....ನಮಗೆಲ್ಲ ಮೊದಲಲ್ಲಿ ಅಪ್ಪ ಅಮ್ಮ ಬೈದು ಬುದ್ದಿ ಹೇಳಿ ಓದು ಅಂತ ಬಲವಂತ ಮಾಡಿ ,ಆಮೇಲೆ ಅಕ್ಕ ಪಕ್ಕ ,peers ನೋಡಿ ..ನಮ್ಮ ದಾರಿ ನಾವು ಕಂಡುಕೊಳ್ತ ಇಲ್ಲಿವರೆಗು ಬಂದಿದ್ದೆವೆ...ಇಷ್ಟಕ್ಕೆ ಏನೊ ಸಾಧಿಸಿದ ಹಾಗೆ ಬೀಗ್ತ ಇರ್ತೀವಿ..ಯಾವತ್ತದರು ನಮ್ಮಷ್ಟು ಅವಕಶ ಸಿಗದ ಅವಕಾಶ ವಂಚಿತರ ಬಗ್ಗೆ ಯೊಚ್ನೆ ಮಾಡ್ತಿವ..?

ಹುಟ್ಟಿದಾರಭ್ಯ ನೀವು ಹೊರಗಿನ ಪ್ರಪಂಚನೆ ನೋಡಿಲ್ಲ ಅಂದರೆ..ಯಾವ ಅವಕಾಶ ..ಎಲ್ಲಿದೆ ಅಂತ ಹೇಗೆ ಗೊತ್ತಾಗಬೇಕು..? ಈಗಿನ ಕಾಲದಲ್ಲಿ ಅಷ್ಟು ತಿಲಿವಳಿಕೆ ಇಲ್ಲದೆ ಇರೋರು ಇರ್ತರ..? ಪ್ರಶ್ನೆ ಸಹಜ.. ಇದ್ದರೆ ನಮಗೆ ಗೊತ್ತಿಲ್ಲದೆ ಇರಬಹುದು ಅಷ್ಟೆ..!!!!

ಈ ನಕ್ಸಲ್ ಹೋರಾಟಗಳಾಗಲಿ,ಈ ರೀತಿಯ ಇತರೆ ಹೋರಾಟಗಳಾಗಲಿ ಇದೆ ಅವಕಾಶವಂಚಿತರನ್ನ ಮುಂದಿಟ್ಟು ನಡೆಸಿರುವ ಪ್ರಯತ್ನ..ಇದರ ಉದ್ದೇಶ ಎಷ್ಟು ಸರಿಯಾಗಿದೆ ...? ಈ ಪ್ರಶ್ನೆಗೆ ಉತ್ತರ ತುಂಬ ಪರಮರ್ಶಿಸಿ..ಅಧ್ಯಯನ ಮಾಡಿ ಕೊಡಬೇಕಾಗುತ್ತದೆ...ಆ ಚರ್ಚೆ ಇಲ್ಲಿ ಅಪ್ರಸ್ತುತ...

ನೀವು ಹೇಳಿ ಆ ಅವಕಾಶವಂಚಿತರಲ್ಲಿ ನೀವು ಒಬ್ಬರಾಗಿದ್ದರೆ ಏನು ಮಾಡ್ತ ಇದ್ರಿ...?ನನ್ನ ಕೇಳಿದ್ರೆ ನಾನು ಆ ಕಾಡು ಮೇಡಿನಲ್ಲೆ ಹಾಯಗಿ ನೆಮ್ಮದಿ ಜೀವನ ನಡೆಸ್ತ ಇದ್ದೆ ಅನಿಸುತ್ತೆ ...ಆದರೆ ಅಲ್ಲೂ ಸಮಸ್ಯೆ ಏನು ಅಂದ್ರೆ ಅವರನ್ನ ಕಾಡಿನಲ್ಲು ಹಾಯಾಗಿ ಬದುಕೊಕೆ ಬಿಡ್ತ ಇಲ್ಲ......!!!

No comments: