Friday, August 25, 2006

ವಿರಹ

ಏಕೆ ಕಾಡುವುದೋ ಮನದಿ ಬಯಕೆ..,
ದೂರವಾಗದೋ ನಿನ್ನ ಕನವರಿಕೆ..,

ಹಗಲುಗಳಾಗೆ ಹೆಗಲ ಹೊರಿಕೆ..,
ಇರುಳೊ ವಿರಹದ ಕುಣಿಕೆ..,

ಬಾ ಸಖಿ ಬಾ ಸನಿಹಕೆ..,
ನೀಡೆನಗೆ ನಿನ್ನ ಪ್ರೇಮ ಭಿಕ್ಕೆ..,

ನಿನ್ನೊಲವ ಸುಧೆಯದುವೇ ನನ್ನ ಕೋರಿಕೆ..,
ಬೇರೆನು ಹಿಡಿಸದು ಈ ಹುಚ್ಚು ಮನಕೆ..,

ನೀನಿರದ ಬಾಳು ಬೇಸಿಗೆಯ ಒಣ ಗರಿಕೆ..,
ನಿನ್ನೊಲವ ಚಿಲುಮೆಯೊಂದೆ ನನ್ನ ದಾಹಕೆ..,

ಬಾ ಸಖಿ ಬಾ ಸನಿಹಕೆ..,
ನೀಡೆನಗೆ ನಿನ್ನ ಪ್ರೇಮ ಭಿಕ್ಕೆ..,

ಹೇಗೆ ಮೂಡಿತೋ..?ಎಂದು ಸೋತೆನೋ ಈ ಮೋಹಕೆ..?
ನಗುವ ನಲಿವ ದಿನಗಳಿಗೆ ಶನಿ ವಕ್ಕರಿಸತೇಕೆ..?

ನಾ ನಾನಾಗಿರದೆ ಹೇಳತೀರದ ಚಡಪಡಿಕೆ..,
ಮನದಿ ಕಾರ್ಮೋಡ ಕರಗದೇಕೆ..?

1 comment:

Shiv said...

ಜಯಂತ್,

ನಿಮ್ಮ ಕವನಗಳಲ್ಲಿ ಬಂದು ಸುಳಿಯುವ ಸಖಿ ಯಾರು ಅಂತಾ :)

ಅತ್ಯಂತ ಮನೋಜ್ಝ ಕವನ