Thursday, August 31, 2006

ಕೊನೆಯ ಮಾತು

ನಾ ಹೇಳುವುದಿನ್ನು ಇದೆ...,
ನೀ ಕೇಳಲೆಬೇಕಾದ್ದು ಇದೆ..

ಏಕೆ ಹೊರಟೆ ಹೀಗೆ ನಡುವೆ..?
ಒಮ್ಮೆ ಕೇಳು..ಮನ ಬಿಚ್ಚಿ ನುಡಿವೆ..

ತಪ್ಪು ನನ್ನದಿದ್ದರೆ ನೀನು ಭಾಗಿ,
ನಿನ್ನ ಮೋಹಿಸೆ..,ನಿನ್ನಂದ ಮೋಹಕವಾಗಿ..

ನಾ ನಿನ್ನ ಪ್ರೇಮ ಉಪಾಸಕ..,
ಬರಿ ಕೈ,ವಿಶ್ವಾಸ ಕಡೆ ತನಕ..!!

ನಡೆಯುವೆ ಜೊತೆಗೂಡಿ ..ಭಯ ಬೇಡ..
ನಿನ್ನ ಸನಿಹವೊಂದೆ ಸಾಕು,ಗೆಲ್ಲುವೆ ನಾಡ..

ಇಂದ ನೋಡಿ ಹಿಂದೇಟು ಹಾಕದಿರು..,
ವಸಂತ ಬಂದಾಗ ಮತ್ತೆ ಚಿಗುರು..

ನನಗಾಗಿ ನಾ ಬದುಕಿ,ಹಲವೆಡೆ ದುಡುಕಿ..
ಹೆಚ್ಚೆನು ಬಯಸದೆ,ಬಾಳ ಗುರಿ ಹುಡುಕಿ..,

ನಂಬಿಕೆ ಬದುಕ ಬೊಂಬೆಯಾಟದ ಸೂತ್ರಧಾರ..!!
ಸಂಶಯವಿರೆ ದಿಟ್ಟಿಸು ಕಣ್ಣ ನಿನ್ನೊಲವಿನ ಬೆಳಕು ಧಾರಾಕಾರ..

ಯಾರು ಹೇಗೆ ಅರಿವರು ನೀ ನನ್ನ ಬಾಳ ಶಿಲೆಗಿಡುವ ಉಳಿ..
ಅರಳುವ ಕಲೆ ನಮ್ಮಿಬ್ಬರ ಸುಖದ ಸರಪಳಿ..

ಒತ್ತಾಯಿಸಲು ನೀ ಅರಿಯದ ಮುಗುದೆ ಅಲ್ಲ..,
ಒಂದಂತು ನಿಜ..ನೀನಿರದೆ ನನು ಸಂಪೂರ್ಣನಲ್ಲ..

ನಿನ್ನ ಕೈ ಹಿಡಿಯಲೆನೊ ಇರುವರು ನೂರಾರು..
ನನ್ನೊಲವ ಸಾಗರಕೆ ಸಮನಾರು..?

ನಾ ಅರಿಯೆ ನಿನ್ನ ಮನದ ತುಮುಲ..
ಓಗೊಟ್ಟು ಕೇಳು ಹ್ರದಯವ ನೀಗುವುದು ಕೋಲಾಹಲ..

ನನ್ನೆದೆ ಸಾಮ್ರಾಜ್ಯದ ಸಾರ್ವಭೌಮಳು ನೀನು
ಬದಲಾಗುವುದು ಬದುಕು... ಜೊತೆ ಇರೆ ನೀನು ನಾನು

1 comment:

srinivas said...

:) thumbaa chennaagide nimma blog eege mumduvaresi nanninda enaadroo sahaayaa bekidre thilisi

srinivas