Monday, September 04, 2006

ಗೋಜಲು

ಗೋಜಲು

ಬೇಡ ಬೇಡವೊ ಈ ಗೋಜಲು,
ಒಂದಕ್ಕೊಂದು ಬಿಡಿಸದ ಮಜಲು..,

ಸಾಲದೆ ಉಂಡ ಹೊಟ್ಟೆ,
ಮೈ ಮುಚ್ಚಿದ ಬಟ್ಟೆ..,

ಏನ ಬೇಡಿ ಪಡೆವುದೆಂತು..?
ಬೆಟ್ಟದಷ್ಟಿಟ್ಟರು ಸಾಲದು ಎನ್ನುವುದುಂಟು..!!

ಕಳೆದದ್ದಷ್ಟೆ ನೆನಪು..
ಪಡೆದದ್ದು ಮಾಸಿದ ನೆನಪು..!!

ಸಡಿಲವಾಗದು ಕೈ ನೀಡೆನಲು..,
ಕೊಟ್ಟವನ ಕೈ ಗಟ್ಟಿಯೆ..? ಬೇಡಿದೊಲು..

ಅಂತ್ಯವಾವುದೊ..? ಎಲ್ಲಿ ನಿಲ್ಲುವುದೊ?ಸೂಚನೆ ಇಲ್ಲ..
ನಿದ್ದೆಯಲಿ ನಡೆದಿರುವಂತಿಹುದು ಜಗವೆಲ್ಲ..,

ಏನು ಸಾಧಿಸದೆ ಸೋಲು..!!
ಗೆದ್ದೆನೆಂಬ ಗೆಲುವು.. ದಿನವೆರಡರಲ್ಲಿ ನೀರುಪಾಲು..!!

ಅಲ್ಲಿದೆ ಶಾಂತಿ,ಇಲ್ಲಿದೆ ಮುಕ್ತಿ...
ಮರಳು ಮಾಡುವರ ಕುಯೋಕ್ತಿ..,

ನೀನೆ ಅರಿಯದ ನಿನ್ನ ದಾರಿ,
ಎಡುವತಲೆ ಇರುವೆ ಬಾರಿ ಬಾರಿ..

ಫಲಾಫಲ ನಿನ್ನದಲ್ಲ,ಕೆಸರಿನ ಕಮಲ ಬಾಳು
-ಗೀತಾ ಸಾರ..
ಅರಿತು ಅರಿಯದಂತೆ ಗಾಳಿಯ ಗುದ್ದುತ ಬದುಕು..
-ನಿರಂತರ

No comments: