Wednesday, September 06, 2006

ಶಂಕೆ

ಅವನ ಇವನ ಮಾತನಾಡಿ..,
ನನ್ನ ಒಡಲ ಉರಿಸುವೆ...
ನಾ ನುಡಿವಾಗ ..,
ಗಮನವೆತ್ತಲೋ...! ಹೂಂಗುಟ್ಟುವೆ..
ನಾ ತವಕದಿ ಕೇಳೊ
ಪ್ರಶ್ನೆಗೆ ಏನೋ ಉತ್ತರಿಸುವೆ..,

ಒಳಗೊಳಗೆ ಆತಂಕ,
ನೀ ದೂರಾಗುವುದ ನೆನೆ ನಡುಗುವೆ..,
ಇನ್ನಾರ ತೋಳ ಸೆರೆಯಲ್ಲಿ..,
ನಾ ಜಗವ ಮರೆವೆ..?
ಇನ್ನೆಲ್ಲಿ ಈ ನನ್ನ ಮನವ,
ತೆರೆದು ಇಡುವೆ..?

ಈ ಭಾವ ಹಸಿಯಿರುತಲೇ..,
ನಿನ್ನ ಆ ಬಟ್ಟಲು ಕಂಗಳಿಂದ ದಿಟ್ಟಿಸುವೆ..
ಏನು ಹೇಳದೆ ನೂರು ನುಡಿವ.,
ನಿನ್ನ ಕೆಂದುಟಿಯ ಹಿಗ್ಗಿಸುವೆ..,
ಅದೊಂದು ಒಲ್ಮೆಯ ನೋಟದಿ..,
ಸಕಲ ಶಂಕೆಯನು ದೂರಾಗಿಸುವೆ.....!!!

No comments: