Thursday, September 07, 2006

ಜಯಂತಣ್ಣನ ರಗಳೆ- ಭಾಗ ೫

ಬರೀಬೇಕು ಬರೀಬೇಕು ಬರೀತಾನೆ ಇರಬೇಕು ಅನಿಸುತ್ತೆ, ಮನಸ್ಸಿಗೆ ತೋಚಿದೆಲ್ಲ ಹೇಳೊಕೆ ಯಾರಿಗು ಯಾರು ಸಿಗೊಲ್ಲ ..ಸಿಕ್ರು ಕೇಳ್ತಾರೆ ಅನ್ನೊ ನಂಬಿಕೆ ನನಗಿಲ್ಲ.. ಎಲ್ಲ ಹೇಳ್ಕೊಂಡ್ರೆ ಏನು ಉಳಿಯುತ್ತೆ ..ತಿಳಿ ನೀರ ಹಾಗಿರುತ್ತೆ ಮನಸ್ಸು. ಎಲ್ಲ ಹೇಳ್ಕೊಳೊಕ್ಕೆ ಆಗುತ್ತ ..? ಕಷ್ಟ ಅಲ್ವ..?..ಗೊತ್ತಿರುತ್ತೆ ನಿಮಗನಿಸಿದ್ದೆ ಬೇರೆಯವರಿಗೆ ಅನಿಸಿರಬಹುದು ಅಂತ ಆದ್ರು ಮನಸಿನ ಮೂಲೆಯಲ್ಲಿ ಛೆ ಛೆ ..ನನ್ನ ಬಗ್ಗೆ ತಪ್ಪು ಅಭಿಪ್ರಾಯ ಬಂದು ಬಿಡತ್ತೇನೊ ಅಂಥ ಭಯ.. ಅದು ಇದು ಅಂತಲ್ಲ ಕಾಮನೆಗಳಿಂದ ಹಿಡಿದು ಯಾವುದೆ ವ್ಯಕ್ತಿ/ಸನ್ನಿವೇಶ/ವಸ್ತುಗಳ ಬಗ್ಗೆ ಅನಿಸಿದ್ದೆಲ್ಲ ಹೇಳೊಕೆ ಆಗಲ್ಲ.ಎಲ್ಲ ತೆರೆದಿಟ್ಟರೆ ಏನು ಮಜ !!..ಬೆತ್ತಲೆ ಬದುಕು ಊಹಿಸಿಕೊಳ್ಳೊದು ಕಷ್ಟ.ಮೊದಲಿನಿಂದ ಹೀಗೆ ಇರೊದಕ್ಕೆ ಅಲ್ವ ಹೀಗನಿಸೊದು.?


ಏನು ಗುಟ್ಟೆ ಇಲ್ಲದಂತೆ ಇದ್ದಿದ್ದರೆ ..? ಹೇಗೆ ಸಾಧ್ಯ..? ಅನಾದಿ ಕಾಲದಿಂದಲು ಎಷ್ಟೊಂದು ಗುಟ್ಟು ಸ್ರಷ್ಟಿಯಲ್ಲಿ ಹುದುಗಿದೆ ..ಕತ್ತಲಿನಲ್ಲಿ ಎನೇನಿದೆ ..? ಹುಟ್ಟು ಸಾವಿನ ಆಚೆ ಎನು ..? ಅಂದುಕೊಳ್ಳುವುದು ಒಂದು ,ಆಗುವುದೆ ಒಂದು ..ಯಾಕೆ..? ನಾನು ನಾನೆ ಯಾಕೆ ..?
ಹೀಗೆ ಹತ್ತು ಹಲವಾರು.ಇದು ಪ್ರಕ್ರತಿಯ ಮಾತಾದರೆ ,ಸಮಾಜ..ಸಂಬಂಧದಲ್ಲಿನ ಗುಟ್ಟುಗಳ ಶತಮಾನಗಳಾದ್ರು ಬಯಲಾಗುವುದಿಲ್ಲ...ಜಾತಿ ಬೇಕೆ..? ಕುಲ ಮತ ಎಲ್ಲ ಇಂದಿನ ಸಮಾಜಕ್ಕೆ ಅಗತ್ಯವೆ..?ಎಷ್ಟೆ ಸ್ವಾವಲಂಬಿಗಳಾದ್ರು ನಾವು ಯಾಕೆ ಯಾವಗಲು ಪರಾವಂಬಲಿಗಳಾಗಿ ಬದೊಕೊಕೆ ಇಷ್ಟ ಪಡ್ತೀವಿ..? ಮದುವೆ ಮಕ್ಕಳು ಬೇಕಾ..? ಸರಿಯದ ಉತ್ತರ ಇದೆಯೆ ಇದಕ್ಕೆಲ್ಲ..?

ಯಾವತ್ತಾದ್ರು ನನ್ನ ಜೀವನ ನನಗೆ ಅನಿಸಿದ್ದ ಹಾಗೆ ಬದುಕ್ತಿನಿ ಅಂತ ಅಂದುಕೊಳ್ಳೋಕೆ ಆಗುತ್ತ..?ಪ್ರಾಯದಲ್ಲಿ ಸ್ವಲ್ಪ ಹೋರಾಟ ಇರುತ್ತೆ, ವ್ಯವಸ್ತೆಯೊಡನೆ,ನಿಯಮಗಳೊಡನೆ..ಹೀಗೆ ಯಾಕೆ ಆಗ್ಬೆಕು ..ಹಾಗೆ ಯಾಕೆ ಆಗಬಾರದು..ತರ್ಕ ಮಾಡಿ ಗಾಳಿಯಲ್ಲಿ ಗುದ್ದಾಡಿದ ಹಾಗಿರುತ್ತೆ..ಕಾಲಕ್ರಮೇಣ ಎಲ್ಲರೊಡನೆ ಒಂದಾಗಿ ಓಡಿ ಹೋಗಿ "ಅಜ್ಜ ಹಾಕಿದ ಆಲದಮರಕ್ಕೆ ನೇಣು ಹಾಕ್ಕೊಳಲ್ವ..". ಎಲ್ಲೊ ಸಂಶಯ,ಏನೊ ಭೀತಿ ಆಗಲೆ ಪೆಟ್ಟುಗಳು ಸ್ವಲ್ಪ ಮೆತ್ತಗೆ ಮಾಡಿರುತ್ತವೆ , ರಿಸ್ಕ್ ತಗೊಳೊ ಹಾಗಿಲ್ಲ ..ಇನ್ನು ಮದುವೆ ಮಕ್ಳು ಆದ್ರಂತು ಅಷ್ಟೆ..!! ನಾನು ನನ್ನದು ಇಲ್ಲ ..ಎಲ್ಲ ನಮ್ಮದು ..ಒಳ್ಳೆ ಮೂಡಲ್ಲಿ ಬರೀತ ಇದ್ದೆ ..ಶಿವಪೂಜೆಯಲ್ಲಿ ಕರಡಿಮರಿ ತರ ಇವನೊ ಯಾವನೊ ಬಂದ.. ... ಹೂಂ........
ಅಷ್ಟೆ ಮುಗಿತು.... ಇನ್ನು ಏನು ಹೊಳೀತ ಇಲ್ಲ .. ಮತ್ತೆ ಸಿಗೋಣ... ಅಲ್ಲಿಯವರೆಗು ನಿಮ್ಮವ... ಜಯಂತ.


ಇದನ್ನ ಟೈಪ್ ಮಾಡ್ತಿರೊ ಹಾಗೆ ಅಣ್ಣಾವ್ರ ಹಾಡು ನನಗೆ ತುಂಬ ಇಷ್ಟವಾದ ಹಾಡು ಬರ್ತ ಇದೆ..."ಅನುರಾಗ ಆಆಆಆಅ ಏನಾಯ್ತು...???"" ಅದೇ ಗೊತ್ತಗ್ತ ಇಲ್ಲ ಏನಾಯ್ತು ಅಂತ....

No comments: