Thursday, September 14, 2006

ಹಂಗೆ ಸುಮ್ನೆ.......

ಇವತ್ತು ಬಸ್ಸಿಳಿದು ...ಬಸ್ಸಿಳಿದು ಅನ್ನೊದಕ್ಕಿಂತ ಬಸವಳಿದು(ಸುಸ್ತಾಗಿ) ಮನೆ ಕಡೆ ನಡಿತ ಇದ್ದೆ, ಏನೊ ಇವತ್ತು ಬೆಳಗಿನಿಂದ ಹವಮಾನ ತುಂಬ ಚೆನ್ನಾಗಿತ್ತು...ತಂಪು ಗಾಳಿ , ಇನ್ನೇನು ಜೋರು ಮಳೆನೊ ಅನ್ನೊ ಹಾಗೆ ಹನಿ ಹನಿ ಸಿಂಚನ....ಇದನೆಲ್ಲ ಆಸ್ವಾದಿಸುತ ನಡೆಯುತ ಅವಳ ನೆನಪಾಯ್ತು.ಅವಳು ನನ್ನ ಪ್ರಿಯತಮೆ,ನನ್ನೊಲವು,ನನ್ನ ಜೀವದ ಜೀವ ....ಇದ್ಯಾವುದು ಅಲ್ಲ.ಹೆಸರಿಡದ ಒಂದು ಸಂಬಂಧ ಅಷ್ಟೆ, ಅವಳಿಗೆ ನಾನು ನನ್ನ ಸ್ನೇಹಿತರ ಜೊತೆ ಜೋಗಕ್ಕೆ ಹೋಗಿ ಬಂದಿದ್ದು ,ಮಜ ಮಾಡಿದ್ದು , ಕೆಳಗೆ ಹಾಕಿದಿನಲ್ಲ ಜೋಗದ ನೀರು ಕುಡಿತ ಇರೊ ಫೊಟೊ ಇದೆಲ್ಲದರ ಬಗ್ಗೆ ಹೇಳ್ತ ಇದ್ದೆ.ಇನ್ನು ಮುಗಿಸಿರಲಿಲ್ಲ ಆಗಲೇ "ಫೊಟೊ ಕಳಿಸು ಮತ್ತೆ"" ಅಂದಳು....ನಾನು ಎಂದಿನಂತೆ ಆ ಅನ್ನಲಿಲ್ಲ ಹೂಂ ಅನ್ನಲಿಲ್ಲ...ನನ್ನ ಮೌನದ ಅರ್ಥ ನನ್ನ ಜೊತೆ ಇದ್ದೊರು ಮಾತಡ್ದೊರು ಎಲ್ಲರಿಗು ಗೊತ್ತಿರೊದೆ....ಅದು ನಕಾರಾತ್ಮಕ .......ಅಂದರೆ ಸ್ಪಷ್ಟವಾಗಿ ಇಲ್ಲ ,ಆಗೊಲ್ಲ ಅಂತ..ಅದನ್ನೇ ಹೇಳಬಹುದಲ್ಲ ಅಂದರೆ ನನ್ನ ಕೈಲಿ ಆಗೊಲ್ಲ.ಅದೇನೊ ಯಾರಿಗಾದ್ರು ಇಲ್ಲ ಅನ್ಬೇಕು ಅಂದ್ರೆ ನನಗೆ ಸ್ವಲ್ಪ ಕಷ್ಟ ಆಗುತ್ತೆ ..ಇತ್ತೀಚೆಗೆ ಅಭ್ಯಾಸ ಮಾಡ್ಕೊಳ್ತ ಇದೀನಿ..., ಇಲ್ಲಾಂದ್ರೆ ಜನ ಹಂಗೆ ಹಸಿ ಹಸಿಯಾಗಿ ತಿಂದು ಬಿಡ್ತಾರೆ.ಅವಳು ಎಂದಿನಂತೆ ಮುನಿಸುಕೊಂಡ ಹಾಗೆ ಮಾತಾಡೊಕೆ ಶುರು ಮಾಡಿದಳು.ಏನು ಕೇಳಿದರು ಕೊಂಕಾಗಿ ನಿನಗೆ ಯಾಕೆ ಹೇಳ್ಬೆಕು..? ಹೇಳೊಲ್ಲ ...ಹೀಗೆ ಸಾಗಿತ್ತು . ನಾನು ಸೊಪ್ಪು ಹಾಕಬಾರದು ಅಂತ "ಬೇಡ ಬಿಡು ..." ಅಂದೆ.ಅದಕ್ಕೆ ಅಲ್ವ ಹೇಳೊದು "ಮೀನಿನ ಹೆಜ್ಜೆ,ಹೆಣ್ಣಿನ ಮನಸ್ಸು ಅರ್ಥ ಮಾಡ್ಕೊಳ್ಳೊದು ಕಷ್ಟ"" ಅಂತ.

ಗೊತ್ತಿರೊದು ಒಂದು ಹುಡುಗಿ ..ವೇದಾಂತಿ ತರಹ ಮಾತಡ್ತಾನೆ ಅಂದ್ರ...ನಾನು ಇಲ್ಲಿ ಹೇಳ್ತ ಇರೊದು ನನ್ನ ಅಭಿಪ್ರಾಯ ಅಷ್ಟೆ.ಇಲ್ಲ ಮೀನಿನ ಹೆಜ್ಜೆ ಹುಡುಕೊದು ಸುಲಭ ,ಹೆಣ್ಣಿನ ಮನಸ್ಸು ಅರ್ಥ ಮಾಡಿಕೊಳ್ಳೊದು ಸುಲಭ ಅಂತ ನಿಮಗನಿಸದ್ರೆ ಅದು ನಿಮ್ಮ ಅನುಭವ...ಈ ಜೀವನಾನೆ ಇಷ್ಟೆ ಅಲ್ವ ... ನಮ್ಮ ಅನುಭವಕ್ಕೆ ಬಂದಿದ್ದು ಸರಿ ಅನಿಸುತ್ತೆ ,ಬೇರೆ ಎಲ್ಲ ಎಷ್ಟು ಹೇಳಿದ್ರು ಅರ್ಥ ಆಗೊಲ್ಲ.

ಸರಿ ಮತ್ತೆ ..ನಿದ್ದೆ ಬರ್ತ ಇದೆ..ಈ ದಿನ ಇದು ಮುಗಿತ ಇರೊ ಹಾಗೆ.. " ಯಾರಿಗೆ ಬೇಕು ಈ ಲೋಕ....?" ಹಾಡು ರವಿಮಾಮ ತುಂಬ ದರ್ದ್ ನಲ್ಲಿ ಹಾಡ್ತ ಇದ್ದಾರೆ...

No comments: