Tuesday, September 19, 2006

ಕನಸು

ಸಾವಿರ ಕನಸ ಹೊತ್ತು ನಡೆಯುತ..
ಜೊತೆಯಾದವರೊಡನೆ ಕೆಲವನು ಹಂಚುತ..
ಸಾಕಷ್ಟು ಎದೆಯ ಕೋತೆಯಲಿ ಕಾಪಾಡುತ..
ಹಗಲು ಇರುಳು ಬಿದದೆ,ಒಂದಕ್ಕೋಂದ ಪೋಣಿಸುತ..,

ನಡೆವಾಗ ಒಮ್ಮೊಮ್ಮೆ.. ಏನೋ ನಡುಕ..
ಎಲ್ಲಿ ನಿತ್ರಾಣನಾಗುವೆನೋ ಅಳುಕ..
ಇನ್ನೆಲ್ಲಿ ಕಾಡುವುದೊ ವಿಧಿಯ ಅಣಕ..
ಅಂತರಂಗದ ಆಲಾಪ.,ಕಾಣುವೆ ನೀ ಬೆಳಕ..

ಕುಣಿಯುತ,ಕುಂಟುತ ನಡೆದೆ,ನಡೆದೆ..
ಅದುಮಿಡಲಾಗದ ಹಲವ ನುಡಿದೆ..
ಕನಸು ನನಸಾಗುವುದು ಎಂದೋ..?ಎಂದೊ ಬಿಡುಗಡೆ..?
ನನಸಾಗದಿರೆ ಏನು..?ಕನಸಿರದ ಬಾಳು..
"ಪಾಯವಿಲ್ಲದ ಗೋಡೆ...!!"

No comments: