Tuesday, September 19, 2006

ಭಾವ

ನೀ ನನ್ನ ನೋಡಿ ನಕ್ಕದಷ್ಟೆ...,
ಮನಸಿದು ಮರ್ಕಟ ವಿಚಲಿತವೇಕೆ..?

ನಾಲ್ಕು ನುಡಿಮುತ್ತು ಉದುರಿಸಿದಷ್ಟೆ..,
ನೂರು ಭಾವಗಳ ಕಲ್ಪಿಸಿಕೊಂಡದ್ದೇಕೆ..?

ನೀ ದಿಟ್ಟಿಸಿದ್ದು ಎಂದಿನಂತೆ, ಎಲ್ಲರಂತಷ್ಟೆ..,
ನಿನ್ನ ಕಣ್ಣ ಕಡಲಲಿ ಕರಗುವ ಕೂಗೇಕೆ..?

ಮಾತಿನ ನಡುವೆ ಮುಂಗುರುಳು ಹಾರುತ್ತಿದಷ್ಟೆ..,
ಸನ್ನೆಯಲಿ ಎನೋ ನುಡಿದಂತೆ ಭಾವವೇಕೆ..?

ಹೋಗುವಾಗ ತಿರುಗಿ, ಮುಗುಳ್ನಗೆ ಬೀರಿದ್ದಷ್ಟೆ..,
ತಿಳಿ ನೀರ ಮನದಿ ಕೋಲಾಹಲವೇಕೆ..?

ಇದುವೇ ಪ್ರೀತಿಯೆ..? ಇದುವೆ ಪ್ರೇಮವೇ..?
ನಿನ್ನ ಆ ಮನದೊಳು ಒಲವಿರಬಾರದೇಕೆ..?

No comments: