Thursday, October 05, 2006

ನೀನೆ ಸರಿಯೊ..!!


ನಾ ನಿನ್ನ ಚುಕ್ಕಿಗಳ ಹೆಕ್ಕಿ ತಾ ಎನಲಿಲ್ಲ..
ನನ್ನ ಮುತ್ತಿಕ್ಕುತಲೇ ಹೊತ್ತು ಕಳೆ ಎನಲಿಲ್ಲ..,
ನಾ ಕರೆಯೆ ಜಗವ ಮರೆತು ಓಡಿ ಬಾ ಎನಲಿಲ್ಲ..,
ಸದಾ ನನ್ನೊಡನೆ ನಿನ್ನ ಸಂಗವಿರಲೆಂದು ಬೇಡಲಿಲ್ಲ..,

ಕೋರಿದ್ದು ಬೊಗಸೆ ನಿಷ್ಕಲ್ಮಶ ಪ್ರೀತಿ..,
ಬಂಗಾರದ ಜಿಂಕೆಯನಟ್ಟಿ ಇರುವುದೆಲ್ಲವ ಕಳೆದೆನಲ್ಲ..!!!

ತಪ್ಪು ನನ್ನದೇ ಇರಬೇಕು,ನಿನ್ನ ಮನವ ಅರಿಯದಾದೆ..,
ನೀ ಬಯಸಿದ್ದು ನಾಲ್ಕು ದಿನದ ಮೋಜು..!,ನಾ ತಾನೆ ಎಡವಿದೆ..,
ಕನಸಿನ ಮಹಲ ಕಟ್ಟಿ ದಿನವೂ ಕಾದೆ.,
ಇಂದಲ್ಲ,ನಾಳೆ ನೀ ಒಲಿದು ಬರುವೆ,ಆ ಭರವಸೆಯಲಿ ಮೂಢನಾದೆ..,

ಕೋರಿದ್ದು ಬೊಗಸೆ ನಿಷ್ಕಲ್ಮಶ ಪ್ರೀತಿ..,
ಬಂಗಾರದ ಜಿಂಕೆಯನಟ್ಟಿ ಇರುವುದೆಲ್ಲವ ಕಳೆದೆನಲ್ಲ..!!!

ಈ ಜಗದ ನಿಯಮಗಳು ನಾ ಅರಿಯದಾದೆನೊ...??
"ಬದಲಾವಣೆ ಜಗದ ನಿಯಮ",ಸಂಬಂಧಗಳಿಗೂ ಅನ್ವಯಿಸುವುದೆನೊ...?
ಕಾಲ ನನ್ನ ಹಿಂದೆ ನೂಕಿತೊ..?,ನಾ ಕಾಲದೊಡನೆ ಓಡದಾದೆನೊ..?
ಅಯೋಮಯವು ಈ ರೀತಿ,ನೀತಿ,ನೀನೆ ಸರಿಯು..!! ನಾನೆ ಎಡವಿದೆನೋ...????!!

3 comments:

tvs said...

ಸುಉಉಉಉಉಉಉಉಉಉಉಉಉಉಉಉಉಉಪರ್ ಕವನ.

ಈ ಸಾಲುಗಳು ಮಾತ್ರ ಅಲ್ಟಿಮೇಟ್

ಕಾಲ ನನ್ನ ಹಿಂದೆ ನೂಕಿತೊ..?,ನಾ ಕಾಲದೊಡನೆ ಓಡದಾದೆನೊ..?
ಅಯೋಮಯವು ಈ ರೀತಿ,ನೀತಿ,ನೀನೆ ಸರಿಯು..

ಯಾರು ಪ್ರತಿಕ್ರಿಯಿಸಲಿ ಬಿಡಲಿ, ನಿಮ್ಮ ಪಾಡಿಗೆ ನೀವು ಬರೆಯುತ್ತಿರಿ. ಹಾಗೆಯೇ ಪ್ರಕಟಣೆಗೆ ಪತ್ರಿಕೆಗಳಿಗೆ ಕಳುಹಿಸಿ.

jayant said...

ತುಂಬ ಧನ್ಯವಾದಗಳು ಸಾರ್ ..ನೀವಂತು ಇದ್ದಿರಲ್ಲ ಎಂದೆಂದು ಪ್ರೊತ್ಸಾಹಿಸಲು...

Manju said...

ತುಂಬಾ ದಿವಸವಾಯಿತು, ನಿಮ್ಮ blogಗೆ ಭೇಟಿ ಕೊಟ್ಟು. ನಿಮ್ಮ ಕವನಗಳು ಹೊಸದರಂತೆ ಕಾಣುತ್ತಿವೆ, ನಿಮ್ಮ ಪರಿಚಯದ ಹಿನ್ನೆಲೆ ಇರಬಹುದೇನೋ. ಈ ಕವನಕ್ಕಂತೂ comment ಮಾಡಲೇಬೇಕೆಂದು ಹಿಡಿದು ನಿಲ್ಲಿಸಿತು. let us not get into the technicalities of literary analysis. ಕವನ ಮನ ತಟ್ಟುವಂತಿದೆ.