Sunday, October 15, 2006

ಮೋಡಿ - ಒಂದು ಚುಟುಕ

ಮಧುರ ಮಧುರ ಪ್ರೇಮದ ನುಡಿ..,
ಆ ಸವಿನುಡಿಯ ನಡುವೆ ನೀನಂದೆ.."ಕೊಡಿ..!"
ಎನೆನಲು ಅದೇ ಮುತ್ತಿನ ಹಾರದ ಸರ..,
ಮೊನ್ನೆ ಕಂಡೆವಲ್ಲ ಚಿನ್ನದಂಗಡಿ ಶೆಟ್ಟರ..,
ನಾ ಅರಿಯಬೇಕಿತ್ತು ನೀ ಮಾಡಿದ ಮೋಡಿ
ಜೊತೆಯಲಿ ತರಕಾರಿ ತರುವ ನೆಪದಿ
ಧುಮುಕಿರಲು ನಾ ಆಳದ ಗುಂಡಿಯಲಿ..
ಪ್ರೇಮ ಕಥನಕೆ ಮಣಿದು .."ಖಾಲಿ ಜೇಬಿನಲಿ"!!!

2 comments:

maavinayanasa said...

ಕವನದಲಿ ಪದಗಳ ಪೋಣಿಸುವಿಕೆಯ ಮೋಡಿ
ಎಲ್ಲೆಲ್ಲೂ ಅರಸುತಿಹುದು ಕಾಣದ ಆ ಜೋಡಿ
ಸಿಗದಿರುವುದಿದು ಮಾರಾಟದಿ ಸೋಡಿ
ಹೇಗಾದರೂ ಒಗ್ಗೂಡಿಸಬೇಕು ಕಾಡಿ ಬೇಡಿ

ಸುಂದರ ಚುಟುಕ - ಚೆನ್ನಾಗಿ ಬರೆದಿದ್ದೀರಿ

jayant said...

ನಿಮ್ಮ ಚುಟುಕಾನು ತುಂಬ ಚೆನ್ನಾಗಿದೆ..ಧನ್ಯವಾದಗಳು ತವಿಶ್ರೀ ಅವರೇ..