Friday, October 27, 2006

ಜಯಂತಣ್ಣನ ರಗಳೆ-ಭಾಗ ೭

ತುಂಬ ದಿನ ಆಯ್ತು ಅವಳ ಜೊತೆ ಮಾತನಾಡಿ.., ಆ ಕಿಲ ಕಿಲ ನಗು ,ಸಂಬಂಧವಿಲ್ಲದ ಪ್ರಶ್ನೆಗಳು ಎಲ್ಲ ಆಗಾಗ ನೆನಪಾಗಿ ಕಾಡ್ತ ಇರುತ್ತೆ....ಕಾಡಬೇಡ ಗೆಳತಿ..ತೋರು ನಿನ್ನ ಮೊಗವ ಒಂದು ಸರ್ತಿ...!! ಯಾವುದನ್ನ ಎಷ್ಟು ಮರೆಬೇಕು ಅನಿಸುತ್ತೊ ಅದೇ ಹೆಚ್ಚು ಜ್ಣಾಪಕ ಬರುತ್ತೆ.ಒಂದೇ ಒಂದು ಸಲ ನೋಡಿ,ಭೇಟಿ ಆಗಿ ಆಮೇಲೆ ಈ ವಿಷಯದ ಬಗ್ಗೆ ತಲೆ ಕೆಡಿಸ್ಕೊಳ್ಳದ ಹಾಗೆ ಹಾಯಾಗಿ ಇರಬಹುದು ಅಂತ ಒಮ್ಮೊಮ್ಮೆ ಅನಿಸುತ್ತೆ.ಆದರೆ ಅಷ್ಟು ಸುಲಭನಾ..? ನೊಡೊ ತನಕ ಒಂದು ನೋವು..!! ನೋಡಿದ ಮೇಲೆ ನೂರೆಂಟು ನೋವು...ಮನುಷ್ಯನ ಪ್ರವ್ರತ್ತಿನೆ ಹೀಗಲ್ವ..??? ಸರಳವಾಗಿರೊ ಜೀವನನ್ನ "COMPLEX" ಮಾಡ್ಕೊಂಡು ಆಮೇಲೆ "ಮೊದಲೆ ಚೆನ್ನಾಗಿತ್ತು...." ಅಂತ ಗೋಳಿಡೊದು.......ಅಣ್ಣಾವ್ರ ಹಾಡು ನೆನಪಿಗೆ ಬರ್ತ ಇದೆ .." ನಗುವುದೊ ಇಲ್ಲ ಅಳುವುದೊ..??? " ಹೇಳೊದೆಲ್ಲ ಸುಲಭಾನೆ..? ಆದರೆ ಮಾಡೊಕೆ ಆಗಬೇಕಲ್ಲ..ಆವತ್ತು ಮಾತು ಆಡೊಕೆ ಶುರು ಮಾಡಿದಾಗ ಇದೇ ತಾನೆ ಅನಿಸಿದ್ದು...ನನ್ನ ಒಂಟಿತನ ಕಳೆಯುತ್ತೆ ಸ್ವಲ್ಪ ದಿನದ ಮಟ್ಟಿಗಾದರು ಅಂತ.ಯಾರಿಗಾದರು ಒಂಟಿತನ ಮರೆಯಾದದ್ದು ಉಂಟ..? ಹತ್ತು ಜನದ ಮಧ್ಯೆ ಕೂತಿದ್ದರು ಒಳಗಿಂದೊಳಗೆ ಆವರಿಸುವ ಈ ಒಂಟಿತನ ಕೊನೆ ಎಲ್ಲಿಯದು ..??ಆದಿ ಎಲ್ಲಿಯದು..? ಹುಟ್ಟಿದ ಮಗುಗೂ ಮಾತು ಬರೊ ಹಾಗಿದ್ರೆ ಅದು ಹೇಳಿರಿತ್ತೆನೊ ಅದಕೆಷ್ಟು ಒಂಟಿತನ ಎಂದು..!!

ಒಂಟಿತನಕ್ಕೆ ಉತ್ತರ ಜೊತೆಗಾರ/ಜೊತೆಗಾತಿನ...??? ಸ್ವಲ್ಪ ಮನಸ್ಸನ್ನ ಕೆರೆದು ನೋಡಿದ್ರೆ ಇಲ್ಲ ಅನಿಸುತ್ತೆ...ನಮಗೆ ತುಂಬ ಇಷ್ಟ ಆದೋರು,ಬೇಕಾದರೊ ಜೊತೆಗಿದ್ರು ನಮ್ಮನ್ನ ಎಲ್ಲರಿಂದ ದೂರವಿಡೊ ಈ ಏಕಾಂಗಿತನ..ಎಷ್ಟೆಲ್ಲ ಒದ್ದಾಡಿದರು ,ಗುದ್ದಾಡಿದರು ಇದರಿಂದ ದೂರ ಓಡೊಕೆ ಆಗೊಲ್ಲ.ನೆರಳಿನ ಹಾಗೆ ಹಿಂಬಾಲಿಸುತ್ತೆ!!. ಒಂಟಿತನ ನಮ್ಮ ರವಿಮಾಮನ ತರಹ "ಏಕಾಂಗಿ" ಅಂತಾನೆ ಅಲ್ಲ....ಏನೆನೊ ಮಾತಡಬೇಕು ಅನಿಸುತ್ತೆ ಆದರೆ ಯಾರ ಜೊತೆ ಮಾತಡಬೇಕು ತಿಳಿಯಲ್ಲ,ಅಕ್ಕ ಪಕ್ಕ ನಾಲ್ಕು ಜನ ನಾಲ್ಕು ತರಹದ ಮಾತು ಆಡ್ತ ಇರ್ತರೆ..ಏನೊ ಅವರಿಗು ನಮಗು ಸಂಬಂಧವೇ ಇಲ್ಲದೆ ಹಾಗೆ ಇರೊದು.

ಯಾರ ಸುದ್ದಿ ಬೇಡ ನನ್ನ ಪಾಡಿಗೆ ನಾನು ಇರ್ತಿನಿ ಅಂದ್ರ ... ಅದೇ ಅಲ್ವ ಒಂಟಿತನ."ನನ್ನ ಹಾಡು ನನ್ನದು,ನನ್ನ ರಾಗ ನನ್ನದು..ನನ್ನ ತಾಳ ನನ್ನದು..." ಹಾಡೊಕೆನೊ ಚೆನ್ನಾಗೆ ಇರುತ್ತೆ...ಆದರೆ ಎಷ್ಟು ದಿನ..?

3 comments:

Annapoorna said...

chennaagide.....
"SaralavaagirO jeevnana complex maadkondu...." sathyavaada maathu... naavu maaduvudhE heege.... :-)javascript:void(0)
Publish Your Comment

jayant said...

ತುಂಬ ಧನ್ಯವಾದಗಳು ಅನ್ನಪೂರ್ಣ ಅವರೇ..

Shiv said...

ನಮ್ಮ್ ಮನಸೇ ಹಂಗೆ ಅಲ್ವಾ..
ಯಾವದೋ ಒಂದು ಮರೆಯೋಕೆ ಹೋಗಿ, ಮತ್ತೇವಾದನ್ನೋ ಹೊತ್ತಕೊಂಡು ಬರುತ್ತೆ..

ಅದರಲ್ಲೂ ನೆನಪುಗಳನ್ನು ದೂರ ಇಡೋದು ಕಷ್ಟ..

ಇಷ್ಟೆಲ್ಲದರ ಮಧ್ಯೆ ನನಗೆ ಅನಿಸಿದ ಮಟ್ಟಿಗೆ ಎಲ್ಲೋ ಒಂದು ಮನಸ್ಸು ನಮ್ಮ ಎಕಾಂಗಿತನವನ್ನು ದೂರಮಾಡುತ್ತೆ, ನಾವು ಹಂಚಿಕೊಳ್ಳಬೇಕೆಂದುಕೊಳ್ಳುವ ವಿಷಯಗಳನ್ನು ಅದನ್ನು ಕೇಳುವ ಒಂದು ಪ್ರೀತಿಯ ಮನಸ್ಸು ಇದ್ದೇ ಇರುತ್ತೆ..

ಸ್ಪಲ್ಪ ತಡವಾದರೂ ಸಿಕ್ಕೆ ಸಿಕ್ಕೆ ಸಿಗುತ್ತೆ..