Sunday, October 29, 2006

ಬೆಳ್ಳಕ್ಕಿ



ಮನದ ಕಾರ್ಮೋಡದಿ ಹಾರುವ ಬೆಳ್ಳಕ್ಕಿ
ಒಮ್ಮೆ ಇತ್ತ ನೋಡಿ ನಗುವೆಯ..!!
ಕಾದು ಕೂತಿರುವೆ ನೀ ಬರುವೆ ಎಂದು...
ಬಂದದ್ದಷ್ಟೆ ಅರಿವು..,ಮತ್ತೆತ್ತ ಹಾರಿದೆ?
ಇನ್ನು ಅಲ್ಲೆ ಕಾದಿರುವೆ ನಿನ್ನ ಆಗಮನಕೆ
ಬಾ ಬಾ ಮರಳಿ ಬಾ,ಹಾರಬಹುದು ಸ್ವಚ್ಚಂದದಿ..


ನೀ ಇರಬಯಸುವಂಥ ಗೂಡ ಕಟ್ಟುತಿರುವೆ
ಜೊತೆಯಲಿ ಸಿಂಗರಿಸಿ ಆಣಿಗೊಳಿಸುವ..,
ನಮ್ಮಿಬ್ಬರ ಕನಸುಗಳಿಗೆ ಕಾಳ ಕೂಡಿಸುವ..
ಹಾರಬಲ್ಲೆನೆ ನಾ ನಿನ್ನಷ್ಟು ಸೊಗಸಾಗಿ?..ನೀನಿರದೆ..
ಜೊತೆಯಾಗಿ ಬಾ ಕೂಡಿ ಹಾರುವ,ದಣಿಯೆ ಗೂಡ ಸೇರುವ..

2 comments:

Shiv said...

ನಿಮ್ಮ ಬೆಳ್ಳಕ್ಕಿ ನಿಮ್ಮ ಪ್ರೀತಿಯ ಗೂಡಿಗೆ ಬಂತಾ??
ಬೆಳ್ಳಕ್ಕಿ ಇರುವುದು ಎಲ್ಲಿ??

jayant said...

ಇನ್ನು ಗೂಡಿಗೆ ಬಂದಿಲ್ಲ...ಇಲ್ಲೆ ಎಲ್ಲೊ ನನ್ನ ಕನಸುಗಳಲ್ಲಿ ಇದೆ