Friday, November 03, 2006

ಮೋಡಗಳು

ಹಾಲ ಹೊಳೆ ಹರಿಸಿ,ಆನಂದದ ತಂಪನೆರಸಿ,
ಮಡುಗಟ್ಟಿದಂತ ಬಿಳಿ ಮೋಡ..,
ಕಾರ್ಗತ್ತಲ ಕೂಡಿಸಿ,ದುಖಃದ ಕಾವನಿಡಿಸಿ,
ಹೆಪ್ಪುಗಟ್ಟಿದಂತ ಕಾರ್ಮೋಡ..,
ಯಾರೊ ಹೆಗಲನಿಟ್ಟವರಿಗೆ,
ಕರಗಿದಂಥ ತಿಳಿ ಮೋಡ..,
ಶರವೇಗದಿ ಓಡಿದ ಹಯವೊಂದರ
ಹೆಜ್ಜೆ ಗುರುತು ಬಿಟ್ಟಂತ ಚದುರಿದ ಮೋಡ..,

ಬಗೆ ಬಗೆ ಆಕೃತಿ,ವಿಧ ವಿಧ ರೀತಿ
ನೀಲಿ ಆಗಸದಿ ಚಿತ್ತಾರವಿಟ್ಟು ಮುದವಿಡೋ ಬೆಳ್ಮೋಡ..,
ಬೆಳಕ ತಡೆದು ಭೀತಿ ಬಿಂಬಿಸುವ ಕಾರ್ಮೋಡ..,
ದೂಕಿದ ಗಾಳಿಗೊ..?,ಮೈ ಮರೆತು ಹಗುರಾದ ತಿಳಿ ಮೋಡ..,
ಹಸುಗೂಸೊಂದು ರಂಗವಲ್ಲಿ ಆಡಿದಂತ ಚದುರಿದ ಮೋಡ..,

ಮೋಡವೆಂತಾದರೇನು..?? ಧರಣಿ ಕಾಣುವುದು ಮಳೆಯನಷ್ಟೆ..?
ಶುಭ್ರ ಆಗಸದಿ ಚಿತ್ರ ವಿಚಿತ್ರ ಮೇಘ..,
ಯಾವ ಮೋಡವದೆಷ್ಟು ಮಳೆಯ ಸುರಿದಿತೋ..?
ಮಿಂಚು ಗುಡುಗು ಇವುಗಳಲ್ಲಿ ಎಲ್ಲಿ ಹುಟ್ಟುವುದೊ..?
ಬೀಸುವ ಗಾಳಿ ಯಾವ ಮೋಡವ ನೂಕಿ ,ಮತ್ತಾವ ಮೋಡವ ತಂದಿತೋ.....


ಈ ಕವನದಲ್ಲಿ ಮೋಡಗಳನ್ನು ಮನದ ಭಾವಗಳೆಂದು , ಆಕಾಶವನ್ನು ಮನಸ್ಸೆಂದು ಅರ್ಥೈಸಿ ಓದಿ ...

5 comments:

Shiv said...

ಜಯಂತ್,

ಅಮೋಘ ಕಲ್ಪನೆ !
ಮೋಡ -> ಮನದ ಭಾವ
ಆಕಾಶ -> ಮನಸ್ಸು

ಕೊನೆಯ ಸಾಲಿಲ್ಲದೆ ಕವನ ಓದಿದಾಗ ಕಾಳಿದಾಸನ ಮೇಘದೂತ ನೆನಪಾಯಿತು..ಮತ್ತೆ ಓದಿದಾಗ ಇನ್ನೂ ಮುದ ನೀಡಿತು..

jayant said...

ನಾನು ಆ ಜಾತಕ ಪಕ್ಷಿ ತರಹ ಕಾಯ್ತ ಇದ್ದೆ..ಯಾರದ್ರು ಎನದ್ರು ಹೇಳ್ತಾರೆ ಅಂತ ಇದರ ಬಗ್ಗೆ ..ಧನ್ಯವಾದಗಳು ಶಿವ್

maavinayanasa said...

ಆಹಾ ಮೋಡದ ಬಗೆಗಿನ ಕಲ್ಪನೆ ಬಹಳ ಚೆನ್ನಾಗಿದೆ. ಮೋಡವನ್ನು ನೋಡುತ್ತಾ ಇದ್ದರೆ ಎಂತೆಂಥದ್ದೋ ಚಿತ್ರಗಳು ಕಾಣುತ್ತಿರುತ್ತವೆ, ಅವುಗಳು ಬದಲಾಗುತ್ತಿರುತ್ತವೆ.
ನಿಮ್ಮ ನೋಟವನ್ನು ತಿಳಿಸುತ್ತಾ, ಇದ್ದಕ್ಕಿದ್ದಂತೆ ವಾಸ್ತವಕ್ಕೆ ತಂದು ಅದರಲಿ ಯಾರಿಗೂ ತಿಳಿಯದ ನಿಸರ್ಗ ಶಕ್ತಿಯನ್ನು ತೋರಿಸಿರುವ ಶೈಲಿಯಂತೂ ಇನ್ನೂ ಚೆನ್ನಾಗಿದೆ.

ಮತ್ತೊಂದು ಸುಂದರ ಕವನ.

jayant said...

ತುಂಬಾ ಧನ್ಯವಾದಗಳು ..ಸಾರ್..

srichandra said...

moda haari hoguttiruttave adakke ondu nirdhishtavaada jaagavilla nillalu,,,,, adiddare alve male