Thursday, November 16, 2006

ಕವಿಯೊಬ್ಬನ ಕಥನ

ಜಗವ ಮೆಚ್ಚಿಸಲು , ಪದಗಳ ಪೋಣಿಸಲಿಲ್ಲ..,
ಪ್ರಚಾರ,ಪ್ರಸಿದ್ಧಿ.. ಅದೆಂತೋ ರುಚಿಸದಲ್ಲ..!!

ಎದೆ ಭಾವ ಇಳಿಸಲು ಲೇಖನಿ ಆಸರೆ,
ತಲೆದೂಗಿ ಹೌದು ಎಂದ....ಇಬ್ಬರಿದ್ದರೂ ಅಕ್ಕರೆ..

ಹೀಗೆ ಈ ಬರಹ..ನಿರ್ಧರಿಸುವ ಅವಕಾಶವೆಲ್ಲಿ..??
ತೋಚಿದ್ದು ಗೀಚಿದಾಗ ಏಕತಾನವಿನ್ನೆಲ್ಲಿ..??

ಅವರು..,ಇವರು.., ಆಗಬೇಕೆಂದು ಎಂದೂ ಬಯಸಿದ್ದಿಲ್ಲ..!!
ನನ್ನತನವ ಉಳಿಸಿ..,ಬೆಳೆಸದೇ ಸಾರ್ಥಕವಿಲ್ಲ..,

ಪ್ರಾಕಾರ,ಛಂದಸ್ಸು,ಶೈಲಿ..ಅರಿಯದ ಬಲೆ..,
ಹೇಳುವುದ ಸವಿಯಾಗಿಸುವುದೇ ಕಲೆ..!!!

3 comments:

Shiv said...

ಜಯಂತ್,
ಇದನ್ನ ಓದ್ತಾ ಇದ್ದಾಗೆ 'ಎದೆ ತುಂಬಿ ಹಾಡಿದೆನು'ನಲ್ಲಿ ಇರೋ 'ಯಾರು ಕೇಳಲಿ ಅಂದು ಹಾಡುವುದಿಲ್ಲ' ಸಾಲು ನೆನಪಾತು..

ಮೊದಮೊದಲಿಗೆ ಎಲ್ಲಾ ಕವಿಗಳು ಹೀಗೆ ಇರ್ತಾರೆ ಅನಿಸುತ್ತೆ..ನಂತರ ಪ್ರಸಿದ್ದಿಗೆ ಬಂದ ಮೇಲೆ ಅದು ಕೇವಲ ಕವಿತೆ ಬರಿಬೇಕು ಅಂತಾ ಬರೀತಾರೆ ಅನಿಸೋದಿಲ್ಲ

jayant said...

ಶಿವ್.. ತುಂಬಾ ದೊಡ್ಡ ಹೋಲಿಕೆ..ಧನ್ಯವಾದಗಳು ..ಆದರು ನೀವು ಹೇಳಿದ್ದು ನನಗೆ ಅರ್ಥ ಆಗ್ತ ಇಲ್ಲ ..ಕೇವಲ ಕವಿತೆ ಬರೀಬೇಕು ಅಂತ ಬರೀತಾರೆ ಅನಿಸೊಲ್ಲ ಅಂದ್ರೆ ಏನು ಅಂತ ತಿಳಿತ ಇಲ್ಲ..

Shiv said...

ಅಂದ್ರೆ ಮೊದಲು ಎನೇ ಬರೆದರೂ ಕವಿ ತನಗಾಗಿ ಬರೆಯುತ್ತಾನೆ ಅಂತಾ..ಅಂದರೆ ವ್ಯಾಪಾರ ದೄಷ್ಟಿಯಿಂದ ಬರೆದಿರುವುದಿಲ್ಲ.ನಂತರ ಪ್ರಸಿದ್ದಿಗೆ ಬಂದ ಮೇಲೆ ಎನೇ ಬರೆದರೂ ಇದನ್ನು ಬರೆದರೆ ಎಷ್ಟು ಪುಸ್ತಕ ಮಾರಾಟವಾಗುತ್ತೆ ಅಂತಾ ಯೋಚನೆ ಇದ್ದೇ ಇರುತ್ತೆ ಅಂತಾ ನನ್ನ ಅನಿಸಿಕೆ