Monday, November 20, 2006

ನನ್ನೊಳಗಿನ ಕವಿ

ನಾಲ್ಕು ಗೋಡೆಯ ನಡುವೆ
ಅದ ಯೋಚಿಸಿ,ಇದ ಕಲ್ಪಿಸಿ..,
ಬರೆದವು ಹಲವು ಸಾಲುಗಳು..,

ಪೌರ್ಣಮಿಯ ಚಂದ್ರಗೆ ನುಲಿವ ಸಾಗರದಿ,
ಮನದುಬ್ಬರಕೆ ಮಣಿದು..,
ಹರಿವ ನದಿಗೆ ಕಟ್ಟೆಯನಿಟ್ಟಂತೆ,
ಕೆಲ ಕ್ಷಣಗಳ ಭಾವವ ಸೆರೆ ಹಿಡಿಯುತ
ಭಾವಗಳ ಪೂರವ ಪದಗಳಿಗೆ ಬಸಿಯುತ,

ಬರೆವ ಕೈ ನನ್ನದಲ್ಲ..!!!
ಬರೆಸುವವ ನಾನಲ್ಲ..!!
ಅವ ನನ್ನೊಳಗಿರುವುದಷ್ಟೇ ಅರಿವು..

ಏನ ಬರೆದನೋ..?? ಮತ್ತೇನ ಹೇಳಿದನೋ..??
ಕಾವ್ಯ ಕೄಷಿಗೆ ಅದೆಲ್ಲಿ ಉತ್ತಿ ಬೆಳೆವನೋ..???

2 comments:

Shiv said...

ಜಯಂತ್,

>ಪೌರ್ಣಮಿಯ ಚಂದ್ರಗೆ ನುಲಿವ ಸಾಗರದಿ,
ಮನದುಬ್ಬರಕೆ ಮಣಿದು..

ಯಾವುದೂ ಆ ಪೌರ್ಣಮಿ ನಿಮ್ಮ ಮನದುಬ್ಬರಕೆ ಕಾರಣವಾಗಿರೋದು :) ಅದಕ್ಕೆ ಒಂದು ಹೆಸರು ಇದೆ ಅಂತಾ ನನ್ನ ಅನಿಸಿಕೆ..

'ನಗಿಸಲು ನಾನು ನಗುವೆನು ನಾನು....ನಾನೊಂದು ಗೊಂಬೆಯು ನೀ ಸೂತ್ರದಾರಿ' ಶೈಲಿಯಲಿ 'ಬರೆಸುವವ ನಾನಲ್ಲ' ಬಂದಿದೆ

jayant said...

ಆ ಪೌರ್‍ಣಮಿ ಅದು ಇದು ಅಂತ ಹೇಳೊಕಾಗಲ್ಲ..ಸನ್ನಿವೇಶದ ಮೇಲೆ "depend" ಆಗುತ್ತೆ..