Thursday, January 04, 2007

ಜಯಂತಣ್ಣನ ರಗಳೆ - ಭಾಗ ೮

ಇತ್ತೀಚೆಗೆ ನನಗಿಷ್ಟು ಸಮಯ ಸಿಕ್ಕಿರಲಿಲ್ಲ ..ರಗಳೆ ಬರೆಯದೆ ತುಂಬ ದಿನ ಆಯ್ತು, ಅಂದ ಮಾತ್ರಕ್ಕೆ ಬರೆಯೊದಿಕ್ಕೆ ಏನು ಇರಲಿಲ್ಲ ಅಂತ ಅಲ್ಲ..ಬರೆಯೊದಿಕ್ಕೆನೊ ತುಂಬ ಇತ್ತು.. ಆದರೆ ಬರೆಯುವ ಸಮಧಾನವಾಗಲಿ ಸಮಯವಾಗಲಿ ಇರುತ್ತ ಇರಲಿಲ್ಲ.. ಅದ್ಯಾಕೊ ಒಂದಷ್ಟು ದಿನದಿಂದ ನನ್ನ ತಲೆಯಲ್ಲಿ ಹುಳು ಒಡಾಡ್ತ ಇರೊದು ... "ಆಸೆ"..

"ಇಷ್ಟು ದೊರಕಿದರೆ ಮತ್ತಷ್ಟರಾಸೆ,
ಮತ್ತಷ್ಟು ದೊರಕಿದರೆ ಇನ್ನಷ್ಟರಾಸೆ..
ಕಷ್ಟ ಬೇಡೆಂಬಾಸೆ,ಸುಖವ ಪಡುವಾಸೆ "

ಅನ್ನುವ ದಾಸೊಕ್ತಿಯಂತೆ ಮನುಷ್ಯನಿಗೆ "ಸಾಕು" ಅಂತ ಅನಿಸೊದೆ ಇಲ್ಲ ..ಹೌದು ಒಪ್ಪಿಕೊಳ್ತೀನಿ ಇರೊದ್ರಲ್ಲಿ ತೃಪ್ತನಾದರೆ ಮುಂದೆ ಬೆಳೆಯೊದಿಕ್ಕೆ ಮಾರಕ ಅಂತ ..ಹಾಗಂತ ಪ್ರತಿಯೊಂದು ವಿಷಯದಲ್ಲೂ ಈ ಭಾವನೆ ಎಷ್ಟು ಸಮಂಜಸ..
ವೇದಂತ ಮಾತಡ್ತ ಇಲ್ಲ ನಾನು.. ಎಷ್ಟೊ ಸಲ ಬೀದಿಲಿ ಮಲಗಿರೊ ನಾಯಿ ಕಂಡು ನನ್ನ ಹೊಟ್ಟೆ ಕರುಬುತ್ತೆ..ಆಹ ಎಂಥ ಸುಖಜೀವಿ ಅನಿಸುತ್ತೆ..
ಇರೊದ್ರಲ್ಲಿ ನಾವು ಸುಖವಾಗಿರೊದಕ್ಕೆ ಆಗೊಲ್ವ..?? ಈ ತೀರದ ದಾಹಕ್ಕೆ ಕೊನೆ ಎಂದು ..?? ದುಡ್ಡು ಕಾಸು ಹೆಚ್ಚಿದರೆ ಸುಖ ಜಾಸ್ತಿ ಅನ್ನೊದ್ರಷ್ಟು ಶುದ್ಧ ಸುಳ್ಳು ಬೇರಾವುದು ಇಲ್ಲ ಅಂತ ನನಗನ್ನಿಸುತ್ತೆ.. ಇಲ್ಲಿ ನನ್ನ ಗೆಳೆಯನೊಬ್ಬನ ಮಾತನ್ನ ನೆನೆಸ್ಕೊಬೇಕು ಅನಿಸ್ತ ಇದೆ.."ಈಗಿನ ಕಾಲದಲ್ಲಿ ಸಾಲ ಇರದವನೆ ಮಹ ಶ್ರೀಮಂತ".. ಹೌದಲ್ವ..?
ತೂತು ಮಡಿಕೆ ನಮ್ಮ ಜೀವನ..!!! ಎಷ್ಟು ಸುರಿದರು ಸೋರಿ ಹೋಗ್ತಾನೆ ಇರುತ್ತೆ.. ಅಯ್ಯೊ!! ತುಂಬಲಿಲ್ಲ ಅಂತ ಮತ್ತೆ ಮತ್ತೆ ತುಂಬ್ತ ಇರೋದು ಗೋಳಾಡೊದು ..ಅದರ ಬದಲು ತೂತು ಹುಡುಕಿ ತ್ಯಾಪೆ ಹಾಕಿ..ಸಾಕಷ್ಟು ಮಟ್ಟಿಗೆ ತುಂಬಿ ನೆಮ್ಮದಿಯಾಗಿರುವದನ್ನ ಕಲಿಯಬೇಕೆನೊ..??

No comments: