Wednesday, January 10, 2007

ಹೊರಡುವ ಮುನ್ನ...........

ಮತ್ತೆ ಬೆಳಗಾಯಿತೆ..??
ಇಂದು ಶನಿವಾರವೆ..ಓಹೊ ಅಲ್ಲ..
officeಗೆ ಹೋಗಲೇಬೇಕು..

ಎಷ್ಟೋ....
ಬಾರಿ ಅನ್ನಿಸಿದ್ದುಂಟು..
ಏನೀ ಬದುಕು,ಹೊರಟದ್ದೆತ್ತ..?
phoenix ಹಕ್ಕಿಯಂತೆ...
ಬೂದಿಯಿಂದ ಹುಟ್ಟುವ ಜೀವ..,ಭಾವದಂತೆ..!!!!
ಮತ್ತೊಮ್ಮೆ ಸತ್ತು.., ಮಸಣದಿ ಮಲಗಿದಂತೆ..

ಇದು ಇಂದಿನದಲ್ಲ... ಕಥೆ,ವ್ಯಥೆ..
ಅರಿವು ಮೂಡಿದಾಗಿನಿಂದ ಅದೇನೋ...
ಹುಚ್ಚು ಸೆಳೆವು...
ನೀ ನೀನಲ್ಲ....ನಿನ್ನ ಗುರುತು ಬೇರೆ ಇಹುದಲ್ಲ..?
ಯಾವ ಗುರುತು..ಎಲ್ಲಿದೆ ತಾಣ..?
ಪಕ್ಕದಮನೆಯ ರೇಡಿಯೊನಲ್ಲಿ p.b.s ಹಾಡಿದಂತೆ..
ಭಯ ಬೇಡಾ...ಅಳುಕಬೇಡ...
ಸರಿಯದ ಟ್ರೈನ್ ಟಿಕೆಟ್ ನೀ ಕೊಂಡಿರುವೆಯಲ್ಲ..??
ಟಿಕೆಟ್ ಸರಿಯೆ..ಯಾವ platform..ಯಾವ ಬೋಗಿ..ಓದಲು ಬಾರದೆ..!!

ಇವ ನಮ್ಮವನಲ್ಲ..ನಮ್ಮಂತೆ ಇಲ್ಲವಲ್ಲ..!!
ನನು ನಿಮ್ಮವನಾಗಲು ಶತ ಪ್ರಯತ್ನಿಸಿದರೂ..
ಕಣ್ಣ ಮುಚ್ಚುವಾಗಲೆಲ್ಲಾ..
ಚುಚ್ಚುವುದೊಂದೆ...ಏಕಾಗಲಿ ನಿಮ್ಮಂತೆ...?!!
ನಾ ಹೊರಟೆಡೆ,, ನಿಮ್ಮ ಟಿಕೆಟ್ ಇಲ್ಲವಲ್ಲ..

ಸರಿ ಹೋಯಿತು..ಆಗಲೆ ವೇಳೆಯು ಮೀರಿತು..
ಶೇವಿಂಗು..ಸ್ನಾನ...ಬಟ್ಟೆ..
ಬೆಳಕಿರದ ಕೂಪದಲಿ..ಬೇಕೂಪ ಮಂಡೂಕ
ಬೆಳಕ ಕಂಡು,ನೆಗೆಯುತ್ತ,ಕುಪ್ಪಳಿಸುತ್ತ..
ಅದ್ಯಾರೋ ರಾಜಕುವರಿಯ ಮುತ್ತ ನೆನೆಯುತ...
ಯಾವ ರಾಜ್ಯವೊ..?? ಆಳುವ...ಬಿತ್ತಿರದ ಬರಡು ಭುವಿಯ ಹೂಳುವ.....

ಇದೊಂದು ಹೊಸ ಪ್ರಯತ್ನ....ಹೇಗಿದೆ ತಿಳಿಸಿ..

2 comments:

Shiv said...

ಹೊರಡುವ ಮುನ್ನ...
ಒಂದು ವಿಭಿನ್ನ ಪ್ರಯತ್ನ ಅನಿಸ್ತು..

>ನಿಮ್ಮ ಟಿಕೀಟ್ ಇಲ್ಲವಲ್ಲ..
ಇದು ಯಾವ ಟಿಕೀಟ್ ನೀವು ಹೇಳ್ತಾ ಇರೋದು?

ಟಿಕೇಟ್, ಪಿ.ಬಿ.ಎಸ್ ಹಾಡು,ಟ್ರೈನ್..ಚೆನ್ನಾಗಿ ಜೋಡಿಸಿದಿರಾ.

>ಅದ್ಯಾರೋ ರಾಜಕುಮಾರಿ ಮುತ್ತ ನೆನೆಯುತ...
>ಬಿತ್ತಿರದ ಬರಡು ಭುವಿಯ ಹೂಳುವ

ತುಂಬಾ ಇಷ್ಟ ಅಯ್ತು ಈ ಸಾಲುಗಳು

jayant said...

ಶಿವ್..,

ನನ್ನ ಟಿಕೆಟ್ ಇದೆ ..ನಾನು ಯಾರ ಹಾಗೆ ಇರಬೇಕು ಅನಿಸ್ತ ಇದೆಯೊ ಅವರ ಬಳಿ ನಾನು ಹೋಗುವೆಡೆಯ ಟಿಕೆಟ್ ಇಲ್ಲ ಅಂತ..
ನಿಮ್ಮ ಪ್ರ್‍ಓತ್ಸಾಹ ಹೀಗೆ ಇರಲಿ..