Sunday, January 14, 2007

ನಾಳೆಯ ಗೂಡು

ನಾ ಹೊರಟು ನಿಂತು..ತಿರುಗಿ ನೋಡೆ..
ಹೊಸಿಲಲ್ಲಿ ನಿಂತ ನೀ ಕಾಲನ ಹಳಿದೆ..
ಹೊರಟಿರುವೆನೆಲ್ಲಿ....??
ಸಂಜೆ ಗೂಡ ಸೇರುವೆನಲ್ಲ..
ಗುಡು ಗುಡು ಗುಡುಗೋ..ಬರಸಿಡಿಲೋ..
ಗೂಡ ಸೇರದಿರಬಹುದಲ್ಲ...ನಲ್ಲ..?
ಭರವಸೆ
ಬೆಳಕು..,ನಾಳೆಯ ಹೊಳಪು..
ನಾಳೆ..ನಾಳೆ...ನಾಳೆ....
ಇಂದಂತೂ ಅಲ್ಲವೇ ನಾಳೆ..!!
ನಲಿ ನಲಿವ ಕಂದನ ಮುಸುಕು...ನಾಳೆ
ಮುಸುಕು,ಮಸುಕು,ಸುಕ್ಕು ಸುಕ್ಕಾದ ನೆನಪು .. ನಾಳೆ.

ನಭೋಮಂಡಲದಿ ದಿನಕರತೇಜ
ಪಸರಿಸುತ ಓಜಸ್ಸು..,ಅದೆಂತಹ ತೇಜಸ್ಸು..!
ಅಂಧಕಾರವ ಓಡಿಸುತ,ಬೆಳಕಿನ ಕಿರಣವ ಚೆಲ್ಲುತ..
ಓಡಿತೋ....ಓಡಿತು...ಅಂಧಕಾರ.,ಅಂಧಕಾರ
ಕಣ್ಣು ತಪ್ಪಿಸಿದನೇ ..ಅಂಧ-ಕರ..?
ನಾಳೆಯ ಬೆಳಕೂ
ಕಾಣದ ಮೂಢರ..
ಮೂಢ,ಗೂಢ,ನಿರ್ಭಿಡ...,ತಪ್ಪಿದ ಬೀಡ,
ಬೀಡ ಹುಡುಕಲು,ಗೂಡೆಲ್ಲೋ ನಿಗೂಢ..!!!

ಗೂಡು,ಬೀಡು...ಗಾಢ ಯೋಚನೆ..
ಗಡ ಗಡ ನಡುಗಿ,
ಕದ್ದು ಕಾಲ ಬಳಿ ಕೂತ ಕಾಲನ..,ಹೊದ್ದು ಬೆಚ್ಚನೆ..

ಜಯಂತ್

2 comments:

Shiv said...

ಜಯಂತ್,

>ಗೂಡು ಸೇರದಿರಬಹುದಲ್ಲ..
ಹಾಗಂತ ಹೋಗದೇ ಇರೋಕು ಆಗೋಲ್ಲ..
ನಾಳೆಯ ಹೊಳಪುಗಳೇ ಭರವಸೆ.

>ನಭೋಮಂಡಲದಿ ದಿನಕರತೇಜ
ಪಸರಿಸುತ ಓಜಸ್ಸು..,ಅದೆಂತಹ ತೇಜಸ್ಸು..!
ಅಂಧಕಾರವ ಓಡಿಸುತ,ಬೆಳಕಿನ ಕಿರಣವ ಚೆಲ್ಲುತ..
ಓಡಿತೋ....ಓಡಿತು...ಅಂಧಕಾರ.,ಅಂಧಕಾರ

ತುಂಬಾ ಇಷ್ಟ ಆಯ್ತು ಈ ಸಾಲುಗಳು..

ಯಾವಾಗಲೂ ಬೆಳಕಿನ ಕಿರಣ ನಿಮ್ಮ ಬಾಳನ್ನು ಬೆಳಗಲಿ ಎಂದು ಹಾರೈಸುತ್ತ, ಸಂಕ್ರಾಂತಿ ಶುಭಾಶಯಗಳು

jayant said...

ಧನ್ಯವಾದಗಳು ಶಿವ್..ನಿಮ್ಮ ಹಾರೈಕೆ ಹಾಗು ಉತ್ತೇಜನಕ್ಕೆ..