Thursday, January 18, 2007

ಸಖಿ

ಕೇಳೇ ಸಖಿ..ಒಮ್ಮೆ ನೋಡೆ ನನ್ನೆಡೆ,
ಉಕ್ಕಿ ಹರಿವ ಒಲವು,ಒಲವ ಸೂಸುವ ಪದವು
ಸುಳ್ಳಾಡದಿರಿ ಅಂದೆ..,ಸುಳ್ಳೆ...?
ಸುಳ್ಳು.., ಪದಗಳೋ..?ಪದಗಳಾಡಿಸಿದ ಮನವೋ..?
ಮನದಿ ಈ ಭಾವ ಭರಿಸಿದ ಒಲವೋ..?

ಆ ಬಟ್ಟಲುಗಣ್ಣ ನೋಟದಿ ಒಮ್ಮೊಮ್ಮೆ ಚುಚ್ಚುವೆ
ನನ್ನ ಒಲವ, ಮಾತ ಒರೆಗೆ ತಿಕ್ಕಿ ತಿಕ್ಕಿ ಉಜ್ಜುವೆ
ನಿನಗಾವ ಸಂಶಯವೊ..?ಚೆಲ್ಲಾಟವೊ..?
ನಾ ಕೈ ಚೆಲ್ಲಿ ಕುಗ್ಗೆ..ಆಹಾ! ಅದೇನು ನಗುವೊ?

ಇಲ್ಲದ ಸಲ್ಲದ ಸವಾಲುಗಳ ನಾನೂ ಒಡ್ಡುವೆ
ಮುಖವ ಗಂಟಿಕ್ಕಿ..ದುರು ದುರು ದಿಟ್ಟಿಸುವೆ..
"ನಾ ಆಡಿದರೆ ಅದುವೆ ಆಟ,ತಾಳಲಾರೆ ಈ ನೋಟ..
ಸುಡದಿರಿ ಈ ಸಂಶಯದಿ",ತುಂಬು ಕಣ್ಣಿಂದ ನೀ ಗೋಗರೆವೆ..

ಕಿಚ್ಚಿಗೆ ಕರಗುವ ಕರ್ಪೂರವು,ಅನುಮಾನವು..
ನೆಲವ ನೋಡದ ಅಶ್ರು ಬಿಂದುವದುವೆ ಕಿಚ್ಚು.
ಆಡಿಕೊ,ಒರೆಗೆ ಹಚ್ಚಿಕೊ,ನಿನ್ನವನಲ್ಲವೆ ನಾನು
ನನ್ನಾಟವನ್ನೂ ಆಡಿಕೊ,ಆ ನಗುವೊಂದೆ ಸಾಕು ನನಗೆ...!!

5 comments:

ಸುಶ್ರುತ ದೊಡ್ಡೇರಿ said...

ನಿಮ್ಮ ಸಖಿಗೀತ ಒಂಥರಾ ಚೆನ್ನಾಗಿದೆ :)

jayant said...

ಧನ್ಯವಾದಗಳು ಸುಶ್ರುತ ಅವರೇ..

Enigma said...

hege aledaadutha nimma blog sikithu . bahal chenagi baritheera :) nimma kaviteh galu sundavagive. baritah iri

jayant said...

thanks enigma avare..aagaaga bandu nodi hogi

mohan said...

Super blog......... rich and dynamic. Tumba channagide.....