Thursday, January 11, 2007

ಕಾಡು ಬಳ್ಳಿ

ಇರದ ಗಾಯವ ಕೆರೆದು ಹುಣ್ಣಾಗಿಸಿ..!!
ನೋವ ಮರೆಯಲು ಮತ್ತೊಂದು ಹುಣ್ಣ ಹುಟ್ಟಿಸಿ..!
ಚೆಂದದ ಗುಲಾಬಿ ತೋಟದ ಅಂದ... ನೀರಸವಾಗಲು
ಕಾಡು ಬಳ್ಳಿಯ ನೆಟ್ಟು..,
ಚಾಚಿಕೊಂಡ ಬಳ್ಳಿಯಲಿ.. ಗುಲಾಬಿ ಹುಡುಕಲು..,

ಸಿಕ್ಕದೆಷ್ಟೋ..??ಹತ್ತರಷ್ಟು ಬದಲಿ ತೆತ್ತು..
ಹತ್ತು ಹಲವು ನೆವದಲಿ.., ನಾನೆ ಸರಿ ಪಟ್ಟ ಹೊತ್ತು..
ಸಂತೈಸಲು ಇನ್ನಾರಿಹರಿಲ್ಲಿ..?ಎರಡನೆ.. ಮೂರನೆಯವರು..
ಗುಲಾಬಿಯ ಕಿತ್ತವರಾರಿಲ್ಲಿ.?ನನ್ನೊಳಗೆ ಉಳಿದಿಹರು..!!

ಕೇಳಿ ಪಡೆದ್ದದಲ್ಲವೆ..?ಕೇಳುವರೇ ಹೇಳಿದರೂ..?
ನುಂಗಲಿ ಹೇಗೆ..?ಒಂದು ಹನಿಗೂ ಜಾಗವಿರದು..!
ಸುಖವೆಂದು ಮಲಗಿದ ಚಿತೆಗೆ ಸ್ವತಃ ಕೊಳ್ಳಿಯನಿಟ್ಟು..
ಉರಿಗೆ ಅಂಜಿ ಓಡುತಿರಲು..ನೆಟ್ಟ ಬಳ್ಳಿ ಅಪ್ಪಿ ಮುತ್ತಿಟ್ಟೂ..

ಜಯಂತ್

2 comments:

Shiv said...

ಚೆಂದದ ಗುಲಾಬಿ ತೋಟದ ಅಂದ ನೀರಸವಾಗಿದ್ದೇಕೆ..
ಕಾಡುಬಳ್ಳಿಯಲಿ ಗುಲಾಬಿ ಹುಡುಕಿದ್ದೇಕೆ..

ಹೌದು ಅಲ್ವಾ..ಕೆಲವೊಂದು ಸಲ ಈ ರೀತಿ ಆಗುತ್ತೆ..

ಯಾಕೋ ನಿಮ್ಮ ಮನ ತುಂಬಾ ಕಲಕಿದೆ ಅನಿಸ್ತಾ ಇದೆ..

jayant said...

ಶಿವ್..,

ಹಾಗೆಲ್ಲ ಏನು ಇಲ್ಲ..ನನ್ನ ಮನಸ್ಸು ಪ್ರಶಾಂತವಾಗೇ ಇದೆ..ಇದೆಲ್ಲ ಕೆಲವು ಕ್ಶಣಗಳ ಭಾವ ಪೂರ..