Thursday, February 01, 2007

ನೀ ಬರುವಾಗ

ನೀ ಬರುವಾಗ
ಗೆಜ್ಜೆ ದನಿ ಇರಲಿಲ್ಲ..
ನಿನ್ನಾಗಮನವ
ಸೂಚಿಸುವ ಶಕುನವೂ ಇಲ್ಲ..
ಬಾಗಿಲು ತೆರೆದಿತ್ತು..,ಒಳಗೆ ಬಂದೆ,
ತೆರೆದ ಬಾಗಿಲು,ನಿನಗಾಗಿಯೇ ಅಲ್ಲ..!!
ಬಂದವಳು ಬಾಯಿ ಬಿಡಬಾರದೇ..?
ನನ್ನದೇ ಮಾತು..
ನೀ ಕೇಳುವೆನೆಂದೆ..
ಜಡಿಮಳೆಯ ನಡುವೆ
ಕೋಲ್ಮಿಂಚಿನಂತೆ,ಒಮ್ಮೊಮ್ಮೆ ನುಡಿದೆ
ನೀ ನುಡಿಯಲಿಲ್ಲ..!
ಮನವ ತೆರೆದು ಹರಡಿದೆ..
ಹರಡಿದ ಹಲವು ಭಾವದಿ
ನನ್ನ ಬಿಂಬವೂ ಕಂಡೆ..!!
ನೀ ನೇರ ನುಡಿಯವಳೆಂದೆ
ನಿನ್ನ ಸನಿಹದಿ ನಾ ನಾನಾಗಿರುವೆನೆಂದೆ
ನುಡಿದೆ,ಜೊತೆ ನಡೆದೆ,ಕೈ ಚಾಚಿದೆ...
ಬೆರಗುಗಣ್ಣು....!!
ನಂಬಬಹುದೇ ಇವನ..??
ಚಾಚಿದ ಕೈ ಸೋತರು....,
ಏಕೋ ಮನ ಸೋಲದೆ...???

ಜಯಂತ್

2 comments:

ಸುಶ್ರುತ ದೊಡ್ಡೇರಿ said...

ನಿನ್ನ ಸನಿಹದಿ ನಾ ನಾನಾಗಿರುವೆನೆಂದೆ -ಒಳ್ಳೆಯ ಸಾಲು. ಕವಿತೆ ಚೆನ್ನಾಗಿದೆ.

jayant said...

ತುಂಬಾ ಧನ್ಯವಾದಗಳು ಸುಶ್ರುತ ಅವರೇ..ನಿಮ್ಮ ಪ್ರೊತ್ಸಾಹ ಹೀಗೆ ಇರಲಿ..