Thursday, March 01, 2007

ದಾರಿ

ದಾರಿ ನನ್ನ ಕಾಯ್ವುದೇ..?
ನಾ ದಾರಿ ಕಾದು ಕೂತೆ.
ನಿನ್ನ ದಾರಿ,ನಿನ್ನಿಂದ ನನ್ನ ದಾರಿ
ನಮ್ಮಿಬ್ಬರ ದಾರಿ..!

ದಾರಿಯದೇ..!ನಾಲ್ಕು ಹೆಜ್ಜೆ ಇಟ್ಟು,
ನೋವು,ನಲಿವ ಪಾಲನಿಟ್ಟು
ಇಂದು ನಾಳೆಗಳ ಕೂಡಿಟ್ಟು
ಕೂಡಿ ಸಾಗುವ ಮಾತನಿಟ್ಟದ್ದು.

ದಾರಿ ಕಾದವಗೆ ದೂರವೇ..?
ದೂರದೂರ ಆಸೆ ಭಾರವೇ?
ನೆಟ್ಟ ಕಣ್ಣು,ನಿಟ್ಟುಸಿರ ಮನವು
ಹಗಲೂ,ಇರುಳೂ..ಕೂಗೋ ಒಲವು..

-ಜಯಂತ್..

No comments: