Saturday, April 14, 2007

ಚಿಕಾಗೋದ ಒಂದು ಸಂಜೆ..


ಚಿಕಾಗೋ.. ಸಮಯ:ಸಂಜೆ ೭.೨೦ ಏಪ್ರಿಲ್ ೧೧.

ಸಣ್ಣ ಮುಳ್ಳು ಏಳು ದಾಟಿದರೂ ಇನ್ನು ಕತ್ತಲಾಗಿಲ್ಲ.ನಮ್ಮಲ್ಲಿಯ ಮಾಗಿಯ ಕಾಲದ ಬೆಳಗಿನ ಜಾವ ೫.೩೦ಯ ಹಾಗೆ ಕಾಣ್ತ ಇದೆ.ಮಾಗಿ ಅಂದಾಗ ಮುಂದೆ ಬಾಲ್ಕನಿಯಲ್ಲಿ ಬಿದ್ದಿರುವ ಇಂಚುಗಟ್ಟಲೆ ಹಿಮ ಮುದ ನೀಡ್ತ ಇರೊದು ನೆನಪಾಯಿತು.ಬೆಳಗ್ಗೆ ಇಂದ ಬಿಡದೆ ಸುರೀತಾ ಇದೆ..ಹಿಮ ಹೀಗೆ ಇರುತ್ತೆ..ಹೀಗೆ ಸುರಿಯುತ್ತೆ ಅಂತ ಇವತ್ತೇ ನೋಡಿದ್ದು.ಮಜ ಬಂತು...ಇಷ್ಟು ಹೇಳಿದ ಮೇಲೆ ಇದರ ಮೇಲೆ ಕವನ ಬರೆಯದೆ ಇದ್ದರೆ ಆಗುತ್ತ..??


ಒಂದೆಡೆ ಸುರಿವ ಹಿಮ
ಮತ್ತೆ ಕೊರೆವ ಚಳಿ
ಹಿಮಪಾತ,ವರ್ಷದಂತೆ ಸತತ..,
ಇದು ಸ್ಪ್ರಿಂಗ್ ಅಂತೆ..!!
ಈ ಸಮಯದಿ ಹಿಮ...
ಅಪರೂಪವಂತೆ..!!
ಅಪರೂಪವೇನೊ..??
ಅಪ-ರೂಪವಲ್ಲ..ಅಪೂರ್ವ..!!
ಯಾರ ಸ್ವಾಗತವೋ...
ಊರು,ಕೇರಿಗೆಲ್ಲ ಹೊಳೆಹೊಳೆವ ಸುಣ್ಣ..
ಆಗಸದಿಂದ ಸುರಿವ ಪುಷ್ಪ ಪಕಳೆ..
ಎಲೆ ಬಿದ್ದ ಮರ..
ಮರದ ತುಂಬಾ ಹಿಮ
ಬೆಳ್ಳನೆ ಹೊದಿಕೆ ಹೊದ್ದು ಬೆಚ್ಚನೆ ಮಲಗಿದ
ಸಾಲು ಮನೆಗಳು,
ಹಿಮವ ಸೀಳಿ ನುಗ್ಗಿ ನಡೆವ ವಾಹನಗಳು
ಭೂದೇವಿ ಬಿಳಿಯ ಜರತಾರೆ ಉಟ್ಟಂತೆ ಭಾಸ..
ಏನು ಸೊಬಗು ...ಏನು ಅಂದ
ಕೊರೆವ ಚಳಿಯಲು
ಬಿಸಿಯಾದ ಅನುಭವ
...ಜಯಂತ

8 comments:

ಸಿಂಧು Sindhu said...

ಕೊರೆವ ಚಳಿಯಲು ಬಿಸಿಯಾದ ಅನುಭವ.. ಹಿಮದಿಂದಲಾ? ಹಿಮ ನೇವರಿಸಿದ ಕವಿತೆಯಿಂದಲಾ? ಅಡಿಗರ "ಮೋಡ ತಬ್ಬಿತು ನೆಲವ - ಜುಮ್ಮೆನೆ ಪುಳಕಗೊಂಡಿತು ಧಾರಿಣಿ" ಕವಿತೆ ಸಿಕ್ಕರೆ ಓದಿ. ನಿಮಗಿಷ್ಟವಾಗಬಹುದು.

ನಿಮ್ಮ -ಮರೆತು ಬಿಡು - ಕವಿತೆಯ ಈ ಸಾಲುಗಳು ನನಗೆ ಬಹಳ ಹಿಡಿಸಿತು. "ನಿನ್ನ ನೆನಪು ಹೆತ್ತವರಂತೆ,ದೂರ ಸರಿದರು ನೆರಳಂತೆ..!!"

ಸಿಂಧು Sindhu said...

ಜಯಂತ್,
ಕ್ಷಮೆಯಿರಲಿ. ಅಡಿಗರ ಕವಿತೆಯನ್ನು ತಪ್ಪಾಗಿ ಬರೆದುದಕ್ಕೆ.
ಮೊದಲ ಕ್ಷಮೆ ಅಡಿಗರಲ್ಲಿ. ನಂತರ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ.
ಭಾವಲಹರಿಯ ಪ್ರಮಾದ, ಮತಿ-ಅಭಾವದ ಪ್ರಮಾದ. ಇದು.
"ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕಗೊಂಡಿತು ಧಾರಿಣಿ.."

ನಿನ್ನೆ ಮಲಗುವಾಗ ನೆನಪಾಯಿತು ಸರಿಯಾದ ಸಾಲು. ಬೆಳಿಗ್ಗೆ ಇಲ್ಲಿ ಬರೆಯುವವರೆಗೂ ಚಡಪಡಿಸಿ ಹೋದೆ. ಪುಟ್ಟ ಆದರೆ ಗಹನವಾದ ಪದಾಭಾಸಕ್ಕಾಗಿ ದಯವಿಟ್ಟು ಕ್ಷಮಿಸಿ.

Manju said...

ಹ್ಮ್ಮ್... ಬಹಳ ದಿನದ ಮೇಲೆ ಒಂದು "free" verse ನ ಕವನ. ಚೆನ್ನಾಗಿದೆ.

VENU VINOD said...
This comment has been removed by the author.
VENU VINOD said...

ನಂಗೂ ಹಿಮ ಅಂದ್ರೆ ಇಷ್ಟ. ಹಿಮದ ಬೆನ್ನು ಹತ್ತಿ ಅನೇಕ ಕಡೆ ಸುತ್ತಿದ್ದೇನೆ. ಬ್ಲಾಗಲ್ಲಿ ನೀವೂ ನನ್ನ ಹಾಗೆ ಮಂಜನ್ನು ಮೆಚ್ಚಿಕೊಂಡದ್ದು ನೋಡಿ ಖುಷಿಯಾಯ್ತು. ಅದರ ಮೇಲೆ ಬರೆದ ಸಾಲುಗಳೂ ಖುಷಿಕೊಟ್ಟವು

ಜಯಂತ್ said...

ಸಿಂಧು - ಬಿಸಿಯಾದ ಅನುಭವ ಹಿಮವ ಕಂಡು ಕರಗಿದ ಮನದಿಂದ..

ಮಂಜುನಾಥ್- ಇಷ್ಟು ಚಿಕ್ಕ ಕಮೆಂಟ್ ನಲ್ಲಿ ಮುಗಿಯೊಲ್ಲ ಸಾರ್.. ನೀವಿನ್ನು ಹೇಳಬೇಕು...ನಾನು ಕೇಳಬೇಕು

ವಿನೋದ್ - ನಿಮ್ಮನ್ನ ವೇಣು ಅಂತ ಕರೆಯೊದ..? ತಿಳಿಸಿ.. ಹಿಮ ನಿಜಕ್ಕು ಆಹ್ಲಾದಕರವಾಗಿ ತೋರುತ್ತದೆ.

Shiv said...

ಜಯಂತಣ್ಣ,

ಅಲ್ಲಿ ಈಗ ಬಹುಷಃ ಹಿಮ ಕರಗುತಿರಬಹುದು..ಹಾಗೇ ಸೂರ್ಯನ ದರ್ಶನವೂ ಆಗುತ್ತಿರಬಹುದು..
ಅಲ್ವೇ?

chethan said...

ಸೂಪರ್ರಾಗಿದೆ ಕವನ.