Sunday, April 22, 2007

ಇಲ್ಲಿ ಬಾ....

ಉಸಿರು ಉಸಿರಿಗೆ ನಿನ್ನ
ಹೆಸರ ಬರೆವಾಗ
ಬಸಿರಾದ ಬಯಕೆ,
ಬಯಕೆ ಬಳ್ಳಿಯಲಿ
ಮೂಡಿ..,ನಲಿವ ನೆನಪು.

ನೆನಪ ತೊದಲ ನುಡಿ
"ಇಲ್ಲಿ ಬಾ....."
ಇಲ್ಲಿ ಬಾ,ಇಲ್ಲಿ ಬಾ
ನೀನಿರದೆ ಬಾಳಿಲ್ಲ..!!
ನೀನಿರದೆ ನಾನೂ ಇಲ್ಲ.

ಸಪ್ತಸಾಗರದಾಚೆ
ಸುಪ್ತಮನದ ತುಮುಲ..
ದೂರ ಮೈಲಿಗಳಷ್ಟೇ....!!
ಮನಕೆ ಮೈಲಿಗೆಯೇ..??

ರೆಪ್ಪೆ ಬಡಿಯೆ
ಸ್ಥಬ್ದ ಚಿತ್ರ
ಕಣ್ಣ ಮುಚ್ಚೇ
ನಿಲ್ಲದ ಚಿತ್ರ

ಕೂಡಿ ನಡೆವೆವು
ಕನಸ ತೀರದಿ.
ಅನಿಸುವುದೆಕೋ.....
ಸನಿಹಕಿಂತ ನೆನಪು
ಮಧುರ.......

ಜಯಂತ್

1 comment:

Shiv said...

ಸಪ್ತಸಾಗರದಾಚೆ ಸುಪ್ತಮನದ ತುಮುಲ..
ಯಾಕೋ ಎನೋ ಡೌಟು ಜಯಂತ್..
ನಾನು ಕೇಳಿದರೆ ಎನೂ ಇಲ್ಲಾ ಅಂದ್ರೀ :)