Sunday, April 29, 2007

ನಾಯಿ ಜನ್ಮ

ತೊಲಗಾಚೆ..,ನಾಯಿ ಜನ್ಮವೇ..!!
ನಾಲ್ಕು ತುತ್ತನೇನಿಟ್ಟೆ
ನಿನ್ನವನೆಂದುಕೊಂಡೆಯಾ..??

ದಿನವಿಡೀ ದಣಿದು
ಬರುವಾಗ
ಬಾಲವನಲ್ಲಾಡಿಸುವೆ
ಕಾಲ ನೆಕ್ಕಿ
ಕಚಗುಳಿಯಿಡುವೆ
ಪಾಪ..!! ಎಂದೆ.
ಮನೆಯ ಮುಂದೇ
ಕೂರುವುದೇ..??
ಹೋದೆಡೆಯೆಲ್ಲಾ
ಹಿಂದೆ ಬರುವುದೇ..??
ರಾತ್ರಿಯೆಲ್ಲಾ
ಊಳಿಡುವುದೇ..?
ಕೊಟ್ಟ ಮುದ
ಕೆಲ ಕ್ಷಣದ್ದು
ಈ ಪರಿ
ಸಂಕಟವೇ..??
ಸಿಕ್ಕಾವು
ಹತ್ತು,ಆರು
ನೀ ಹೋದರೆ.
ನಿನಗಾಗಿ
ನೆಮ್ಮದಿ ಹೊರಗಟ್ಟುವುದೇ..
ನನ್ನ ನಂಬಿ
ನೀನೂ ಬರಲಿಲ್ಲವೇ..!!
ತುತ್ತು ಬಿದ್ದೆಡೆ
ನಿನ್ನ ನೀತಿ.

ಜಯಂತ್

No comments: