Sunday, May 13, 2007

ಸೂರ್ಯನ ಸೋಲು

ಬೆಳ್ಳಿಯ ಚುಕ್ಕಿ
ಕತ್ತಲ ಹೆಕ್ಕಿ
ತಳ್ಳಿತಾಚೆ ನಭದಿ

ಕಳ್ಳ ಹೆಜ್ಜೆ ಇಡುತ
ಪರಸ್ಪರ ದೂರಾಗುತ
ಹೊನ್ನ ಕಿರಣಗಳ ಅವರೋಹಣ

ಕಣ್ಣಮರೆಸಿ,ಬೆಳಕ ಹರಿಸುವಾ
ಇಂದಾದರು ನಮ್ಮದೇ ಜಯವು
ಮನದಿ ನೆನೆವವು

ಯಾವ ಶಾಪವೋ,
ಇನ್ನಾವ ಪುರುಷಾರ್ಥವೋ?
ಕತ್ತ ಮೀಟಿ,ತಲೆಯ ಕುಣಿಸಿ

ಕ್ಕೊಕ್ಕೊಕ್ಕೊ.....ಕ್ಕೋ!!!!

ಈ ಕವನದ ಮೂಲ ಕರ್ತೃ - ಕುಕ್ಕುಟೇಶ.

ಹಕ್ಕುಗಳನ್ನು ಹೆಕ್ಕಲಾಗಿದೆ.

2 comments:

Enigma said...

hekkuvantahvarigi :)

ಜಯಂತ್ said...

ಎನಿಗ್ಮ..ಅವರೇ.. ನೀವು ಬೈದ್ರಿ ಅಂದುಕೊಳ್ಲ.. [:)]