Thursday, May 31, 2007

ಹೀಗೊಂದು ಕವನ

ಅವಳ ನೆನಪಾದಾಗಲೆಲ್ಲ
ಹೀಗೆ...,
ಹಾಲಿಲ್ಲದ ಟೀ,
ನೀರಸ ಕೆಲಸ,
ಅವೇ
ಉಸಿರುಗಟ್ಟಿಸುತ್ತಿದ್ದ
ಮುಖಗಳು,
ಹೀಗೆ ಎಲ್ಲವೂ
ಏನೋ...
ಹೊಸದಾಗಿ ಕಂಡು,
ಮತ್ತೊಂದು ದಿನವ
ದೂಡಲು,
ನಾಳೆಯ ಕನಸ
ಕಾಣಲು,
ಸಜ್ಜಾಗುತ್ತೇನೆ.
ಹೆಜ್ಜೆ ಹೆಜ್ಜೆ..
ಇಡುತ.

ಜಯಂತ್

7 comments:

Anonymous said...

ನಿಮ್ಮ ಕವನಕ್ಕೆ ನಾನು ಪೂರ್ತಿಯಾಗಿ ನನ್ನ ಅಭಿವಾದಗಳನ್ನು ಅರ್ಪಿಸುತೀನಿ. ಆದರೆ, ನೀವು, ನಿಮ್ಮ ಬ್ಲೋಗಿಗೆ ಯಾವ ಕನ್ನಡದ ಲಿಪಿ ಉಪಯೋಗೀೂವರೆಂದು ನಾನು ತಿಳಿಯಬಹುದೆ?

ಜಯಂತ್ said...

ತುಂಬಾ ಧನ್ಯವಾದಗಳು..ನೀವು ಯಾರು ಅಂತಾನು ತಿಳಿಸಲಿಲ್ಲ.ನಾನು ಬರಹ ಬಳಸುತ್ತೇನೆ.

"POWERED BY BARAHA 7.0"...

Anonymous said...

ಚೆನ್ನೈ ನಲ್ಲಿ ಒಬ್ಬ ಗಣಿತದ ಮೇಷ್ಟ್ರು ನಾನು. ದೊಡ್ಡ ಕನ್ನಡ ಪ್ರೇಮಿ ಅಂದೇ ಹೇಳ ಬಹುದು. ನಿಮ್ಮ ಬ್ಲೋಗನ್ಣು ಒಂದೆರಡು ತಿಂಗಳುಗಳಿಂದ ಓದುವುದು ಚಟುವಟಿಕೆ ಮಾಡಿಕೊಂಡಿದ್ದೀನಿ.
ನನ್ನ ಹೆಸರು ಅಭಿಳಾಶ್
ದನ್ಯವಾದಾಗಲೊಂದಿಗೆ,
ನನಗೆ ಬರಹದ software ಅಷ್ಟು ಇಷ್ಟವಾಗಲಿಲ್ಲ. ಹಾಗಾಗಿ ನಾನು ಈ ವೆಬ್ ಸಿಟ್ ಅನ್ನು ಉಪಯೋಗಿಸುತ್ತಿನಿ.
http://quillpad.in/kannada/
ನನಗೆ ಇಲ್ಲಿ ಆ/ಕ್ ಮಾಡುವಷ್ಟು ಎಲ್ಲ ಕುತೊಹಾಲವಿಲ್ಲ. ಸಾಹಿತ್ಯ ಪ್ರೇಮಿ ನಾನು, ಸಾಹಿತಿ ಅಲ್ಲ!
ದಯವಿಟ್ಟು ಕ್ಷಮಿಸಿ

ಜಯಂತ್ said...

ನಿಮ್ಮ ಪರಿಚಯ ತುಂಬಾ ಸಂತೋಷ ಅಭಿಲಾಶ್ ಅವರೇ.ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಹಾಗು ಕಮೆಂಟ್ ಮಾಡಿ ತಿಳಿಸ್ತ ಇರಿ..ಹೌದು ನಾನು ನೋಡಿದ್ದೇನೆ ಆ ವೆಬ್ ಸೈಟ್ ತುಂಬಾ ಒಳ್ಳೆಯ ಪ್ರಯತ್ನ.ಇನ್ನು ಪ್ರಾಥಮಿಕ ಹಂತದಲ್ಲಿದೆ ಅಂತ ಕಾಣುತ್ತೆ ಸಾಕಷ್ಟು ಕೆಲಸ ಆಗಬೇಕಾಗಿದೆ.ನೀವು ಬ್ಲಾಗ್ ಮಾಡಲು ಸಾಹಿತಿ ಆಗುವ ಅವಶ್ಯಕತೆಯಿಲ್ಲ ಅಂದುಕೊಳ್ಳುತ್ತೇನೆ..ಯಾಕಂದರೆ ನಾನು ಸಾಹಿತಿನಾ ಅನ್ನೋ "ಗುಮಾನಿ" ನನಗೆ ಇದೆ.

ನಿಮ್ಮವ...

ಜಯಂತ್

VENU VINOD said...

ಒಳ್ಳೆಯ ಕಿಕ್ಕಿರೋ ಸಾಲುಗಳು ಜಯಂತ್,
ಎಲ್ಲರಿಗೂ ಹೀಗೆ ‘ಅವಳ’ ನೆನಪು ಬರುವುದು ಸಹಜ

ಜಯಂತ್ said...

ಧನ್ಯವಾದ ವಿನೋದ್

Manjunatha Kollegala said...

good one... missed out again :) :(