Wednesday, July 04, 2007

"ಇರಿ"ಪುರಾಣ

ಸುಮ್ಮನೆ ಸುಮ್ಮನೆ
ಏತಕೀ ಹೋರಾಟ
ಮಾಡೊಂದು ಕೆಲಸ
ಇಗೋ..ಹಿಡಿದಿಕೋ
ಇರಿ..

ಇರಿ..,
ಅಂದೆಯಾ..?
ಇನ್ನೇತಕೆ?
ನಂಬೆನೆಂದು
ನಿನ್ನ ಮನ
ನಂಬಿಸಲೆಂದೆ
ನನ್ನ ಪಣ

ಇರಿ..ಇರಿ..
ಬೇಡವೀ ಬದುಕು

ಇರಿ..ಇರಿ..
ಕೊರಗದಿರಿ,
ನಾನಂದದ್ದು
ಅಲ್ಲ,ಆ ಪರಿ
ನೀವಿರದೆ
ನಾ ಕೆರೆ ದಾರಿ.

-ಜಯಂತ್

No comments: