ನಕ್ಕುಬಿಡು ಸುಮ್ಮನೆ
ಕೂರದೆ ಗುಮ್ಮನೆ.
ನಿಜವಂತೆ... !
ಸ್ನೇಹ, ಪ್ರೀತಿ, ಸಂಬಂಧ
ಇದ್ದ ದಿನಗಳಷ್ಟೇ
ನೋವು, ನಲಿವು.
ಇಲ್ಲದಿರುವುದಕ್ಕೆ
ಇನ್ನಾವ ವ್ಯಥೆಯು ?
ಕಂಡುದುಂಟು
ಮತ್ತೊಂದು ಕಾರಣ,
ಅಶ್ರುಬಿಂದು
ನೆಲವನಪ್ಪುವ ಮುನ್ನ.
ನಿನ್ನದೆಂಬುದಾದರು
ಇದ್ದದ್ದೇನು ?
ಕಳೆದುಕೊಂಡೆನೆನಲು
ಪಡೆದದ್ದಾದರೇನು ?
ಮರುಗದಿರು..
ಮರುಳಾಗುವೆ !
ಮರುಳನಂತೆ ನಕ್ಕುಬಿಡು...
ಹಗುರಾಗುವೆ.
1 comment:
ಚೆನ್ನಾಗಿದೆ :)
"ನಿನ್ನದೆಂಬುದಾದರು
ಇದ್ದದ್ದೇನು ?
ಕಳೆದುಕೊಂಡೆನೆನಲು
ಪಡೆದದ್ದಾದರೇನು ?"
- ಭಗವದ್ಗೀತೆಯ ನುಡಿಗಳಾದರೂ, ಸಂದರ್ಭಾನುಸಾರ ಬಳಸಿದ್ದೀರಿ. ಆಭಾಸ ಎನಿಸುವುದಿಲ್ಲ.
Post a Comment